alex Certify 30 ವರ್ಷದ ಬಳಿಕ ಬಹಿರಂಗವಾಯ್ತು ಬೆಚ್ಚಿಬೀಳಿಸುವ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

30 ವರ್ಷದ ಬಳಿಕ ಬಹಿರಂಗವಾಯ್ತು ಬೆಚ್ಚಿಬೀಳಿಸುವ ಸತ್ಯ

ಅಪರೂಪದಲ್ಲೇ ಅಪರೂಪವಾದ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, 9 ವರ್ಷದ ಹಿಂದೆ ವಿವಾಹವಾಗಿದ್ದ 30 ವರ್ಷದ ಮಹಿಳೆಯೊಬ್ಬರು ವೈದ್ಯಕೀಯ ಪರೀಕ್ಷೆ ವೇಳೆ, ಅವರು ಮಹಿಳೆಯಲ್ಲ, ಹೆಣ್ಣಿನ ಚಹರೆ ಹೊಂದಿದ್ದ ಪುರುಷ ಎಂಬ ಬೆಚ್ಚಿ ಬೀಳಿಸುವ ಸತ್ಯ ಸಂಗತಿ ಬಹಿರಂಗವಾಗಿದೆ.

ಕೋಲ್ಕೊತಾದ ಈ ಮಹಿಳೆ ಕಿಬ್ಬೊಟ್ಟೆ ನೋವಿನ ಕಾರಣಕ್ಕಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾದ ವೇಳೆ ಆಕೆಯನ್ನು ಪರೀಕ್ಷಿಸಿದ ವೈದ್ಯರು ದಂಗಾಗಿ ಹೋಗಿದ್ದಾರೆ. ಈ ವ್ಯಕ್ತಿಗೆ ಸ್ತ್ರೀಯರಿಗೆ ಇರಬೇಕಾದ ಪ್ರಧಾನ ಅಂಗಗಳಾದ ಗರ್ಭಕೋಶ ಹಾಗೂ ಅಂಡಾಶಯವೇ ಇರಲಿಲ್ಲವೆಂದು ಹೇಳಲಾಗಿದೆ.

ಆದರೆ ಬಾಹ್ಯ ಅಂಗಗಳಾದ ಸ್ತನ ಹಾಗೂ ಸ್ತ್ರೀ ಜನನಾಂಗವಿದ್ದು, ಪುರುಷ ಅಂಗವಾದ ವೃಷಣ ಹೊಟ್ಟೆಯೊಳಗೆ ಬೆಳವಣಿಗೆಯಾದ ಪರಿಣಾಮ ಕ್ಯಾನ್ಸರ್ಗೆ ಕಾರಣವಾಗಿತ್ತು ಎನ್ನಲಾಗಿದೆ. ಹೀಗಾಗಿಯೇ ಆ ವ್ಯಕ್ತಿಗೆ ಹೊಟ್ಟೆನೋವು ಬರುತ್ತಿತ್ತು ಎಂದು ಹೇಳಲಾಗಿದೆ. ಈ ಸಂಗತಿ ಬಹಿರಂಗವಾದ ಬಳಿಕ ಪತಿ ಸಂಸಾರ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದ್ದು, ವೈದ್ಯರು ಇದೀಗ ಆತನ ಮನವೊಲಿಕೆಗೆ ಮುಂದಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...