alex Certify ಮದುವೆಯಾದ 9 ವರ್ಷಗಳ ನಂತ್ರ ಗೊತ್ತಾಯ್ತು ಅವಳಲ್ಲ, ಅವನೆಂಬ ಸತ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ 9 ವರ್ಷಗಳ ನಂತ್ರ ಗೊತ್ತಾಯ್ತು ಅವಳಲ್ಲ, ಅವನೆಂಬ ಸತ್ಯ…!

ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ 30 ವರ್ಷದ ವಿವಾಹಿತ ಮಹಿಳೆ ಬಗ್ಗೆ ಆಘಾತಕಾರಿ ಸಂಗತಿ ಹೊರ ಬಿದ್ದಿದೆ. ಮಹಿಳೆ ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದಾಗ ಆಕೆ ಮಹಿಳೆಯಲ್ಲ, ಪುರುಷ ಎಂಬುದು ಪತ್ತೆಯಾಗಿದೆ.

ಮಹಿಳೆಗೆ ಕಳೆದ ಕೆಲ ದಿನಗಳಿಂದ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಭೇಟಿ ನೀಡಿದಾಗ ಸತ್ಯ ಗೊತ್ತಾಗಿದೆ. ಮಹಿಳೆಯಂತಿದ್ದ ಪುರುಷನ ವೃಷಣದಲ್ಲಿ ಕ್ಯಾನ್ಸರ್ ಗಡ್ಡೆಯಿದೆ ಎಂದು ವೈದ್ಯರು ಹೇಳಿದ್ದಾರೆ. ಮಹಿಳೆಗೆ 9 ವರ್ಷಗಳ ಹಿಂದೆ ಮದುವೆಯಾಗಿತ್ತು.

ಅವಳು ನೋಡಲು ಮಹಿಳೆ. ಧ್ವನಿ, ಸ್ತನಗಳು, ಸಾಮಾನ್ಯ ಜನನಾಂಗ ಇತ್ಯಾದಿಗಳು ಮಹಿಳೆಯಂತಿವೆ. ಆದಾಗ್ಯೂ ಆಕೆಯ ದೇಹಕ್ಕೆ ಹುಟ್ಟಿನಿಂದ ಗರ್ಭಾಶಯ ಮತ್ತು ಅಂಡಾಶಯವಿಲ್ಲ. ಅವಳಿಗೆ ಮುಟ್ಟಿನ ಅನುಭವವಾಗಿಲ್ಲ. ಅಪರೂಪಕ್ಕೆ 22 ಸಾವಿರ ಜನರಲ್ಲಿ ಇದು ಕಾಣಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಪತಿ – ಪತ್ನಿಗೆ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿ ಇಬ್ಬರು ಒಟ್ಟಿಗೆ ಜೀವನ ನಡೆಸುವಂತೆ ಸಲಹೆ ನೀಡಲಾಗ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...