alex Certify ಕ್ವಾರಂಟೈನ್ ಕೇಂದ್ರದಲ್ಲಿದ್ದವರಿಗೆ ಯೋಗ, ಅಂತ್ಯಾಕ್ಷರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ವಾರಂಟೈನ್ ಕೇಂದ್ರದಲ್ಲಿದ್ದವರಿಗೆ ಯೋಗ, ಅಂತ್ಯಾಕ್ಷರಿ…!

ಕೊರೋನಾ ಸಾಂಕ್ರಾಮಿಕ ರೋಗ ಕಾಡುತ್ತಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯದಿಂದ ಆಗಮಿಸುವ ವಲಸೆ ಕಾರ್ಮಿಕರನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸುವ ಪ್ರಕ್ರಿಯೆ ಎಲ್ಲ ರಾಜ್ಯಗಳನ್ನು ಜಾರಿಯಲ್ಲಿದೆ.

ಕ್ವಾರಂಟೈನ್ ಸಹಜವಾಗಿ ಒಂದು ರೀತಿಯಲ್ಲಿ ಬೇಸರ ತರಿಸುತ್ತದೆ. ಒಬ್ಬಂಟಿಯಾಗಿ ಎರಡು ವಾರ ಕಳೆಯುವುದು ಸುಲಭವಲ್ಲ. ಹೀಗಾಗಿ ಬಿಹಾರದ ಒಂದು ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್ ಗೆ ಒಳಗಾದವರನ್ನು ಒತ್ತಡ ಮುಕ್ತಗೊಳಿಸಲು, ಅವರ ಬೇಸರ ನಿವಾರಿಸಲು ಯೋಗ, ಹಾಡುಗಾರಿಕೆ, ಅಂತ್ಯಾಕ್ಷರಿ, ಆಟ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತಿದೆ.

ಸೀತಾಮಾರ್ಹಿಯ ಬೇಸ್ಲ್ಯಾಂಡ್ ನಲ್ಲಿರುವ ಗುರುಶರಣ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಆರ್.ಕೆ. ಪಾಂಡೆ ಅವರು ತಮ್ಮ ಶಾಲೆಯಲ್ಲಿ ಕ್ವಾರಂಟೈನ್ ಗೆ ಒಳಗಾಗಿರುವವರಿಗೆ ವಿವಿಧ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿದ್ದಾರೆ. ಈ ಮೂಲಕ ಅವರಲ್ಲಿನ ಒತ್ತಡ ಹಾಗೂ ಬೇಸರವನ್ನು ತೊಡೆದು ಹಾಕಲು ಪ್ರಯತ್ನಿಸಿದ್ದಾರೆ. ಈ ಶಾಲೆಯ 15 ಶಿಕ್ಷಕರು ಸಹ ಈ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...