ಕೊರೊನಾ ಸಾಂಕ್ರಾಮಿಕದಿಂದಾಗಿ ಜೀವ ಭಯ ಒಂದೆಡೆಯಾದ್ರೆ ಮತ್ತೊಂದೆಡೆ ಆರ್ಥಿಕ ಸಂಕಷ್ಟದ ಬರೆ ಅನೇಕರ ಬಾಳಿಗೆ ಬರ ಸಿಡಿಲಿನಂತೆ ಬಡಿದಿದೆ. ಕೊರೊನಾದಿಂದಾಗಿ ಕೆಲಸ ಕಳೆದು ಕೊಂಡ ಅನೇಕ ಮಂದಿ ಜೀವನೋಪಾಯಕ್ಕಾಗಿ ತಪ್ಪು ದಾರಿಯನ್ನ ತುಳಿಯುತ್ತಿದ್ದಾರೆ.
ಇದೇ ಮಾತಿಗೆ ಉದಾಹರಣೆಯೆಂಬಂತೆ ಕೊರೊನಾ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ವ್ಯಕ್ತಿಯೊಬ್ಬ ಜೀವನೋಪಾಯಕ್ಕಾಗಿ ಪುರುಷ ವೇಶ್ಯಾವಾಟಿಕೆಯನ್ನ ನಡೆಸಿದ್ದಾನೆ. ಅಂದಹಾಗೆ ಈತನ ಈ ಕೆಲಸಕ್ಕೆ ಸ್ವತಃ ಆತನ ಪತ್ನಿಯೇ ಸಾಥ್ ನೀಡಿದ್ದಾಳೆ.
ತಮ್ಮ ಕುಟುಂಬವನ್ನ ಸಾಗಿಸೋಕೆ ಈ ದಂಪತಿ ಇಂತಹ ಕಠಿಣ ನಿರ್ಧಾರವನ್ನ ತೆಗೆದುಕೊಳ್ಳೋದು ಅನಿವಾರ್ಯವಾಯ್ತು. ನಿಕ್ಕಿ ಹಾಗೂ ಮಾರ್ಕ್ ( ಹೆಸರು ಬದಲಾಯಿಸಲಾಗಿದೆ) ಬೇರೆ ಯಾವುದೇ ದಾರಿ ಕಾಣದ ಹಿನ್ನೆಲೆ ಈ ಕೆಲಸ ಮಾಡಿದ್ದಾರೆ.
ಇವರಿಬ್ಬರಿಗೆ ಮಕ್ಕಳಾಗೋಕೂ ಮುನ್ನ ನಿಕ್ಕಿ ಈ ಕೆಲಸವನ್ನ ಮಾಡಿದ್ದರು. ಆದರೆ ಮಾರ್ಕ್ಗೆ ಈ ವೃತ್ತಿಯಲ್ಲಿ ಯಾವುದೇ ಅನುಭವ ಇರಲಿಲ್ಲ. ಅಂದಹಾಗೆ ಆತನಿಗೆ ತನ್ನ ನಿರ್ಧಾರದ ಬಗ್ಗೆ ಯಾವ ಪಶ್ಚಾತಾಪ ಕೂಡ ಇಲ್ಲವಂತೆ.