alex Certify ದೆಹಲಿ ಜನತೆಗೆ ಉಚಿತ ಲಸಿಕೆ ಒದಗಿಸಲು ರಾಜ್ಯ ಸರ್ಕಾರ ಸಿದ್ದ ಎಂದ ಕೇಜ್ರಿವಾಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿ ಜನತೆಗೆ ಉಚಿತ ಲಸಿಕೆ ಒದಗಿಸಲು ರಾಜ್ಯ ಸರ್ಕಾರ ಸಿದ್ದ ಎಂದ ಕೇಜ್ರಿವಾಲ್​

ದೆಹಲಿ ಜನತೆಗೆ ಕೇಂದ್ರ ಸರ್ಕಾರ ಕೊರೊನಾ ಲಸಿಕೆಗಳನ್ನ ಉಚಿತವಾಗಿ ನೀಡಬೇಕೆಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಆಗ್ರಹಿಸಿದ್ದಾರೆ.‌

ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ವಿತರಣೆ ಮಾಡಿ ಎಂದು ನಾನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾನೆ. ಕೇಂದ್ರ ಸರ್ಕಾರ ಇದನ್ನ ಮಾಡದೇ ಹೋದಲ್ಲಿ ದೆಹಲಿ ಸರ್ಕಾರವೇ ರಾಜ್ಯದ ಜನತೆಗೆ ಉಚಿತವಾಗಿ ಲಸಿಕೆ ಪೂರೈಸಲಿದೆ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಜ್ರಿವಾಲ್​, ದೇಶದಲ್ಲಿ ಉಚಿತ ಲಸಿಕೆ ನೀಡಿ ಎಂದು ನಾನು ಮನವಿ ಮಾಡಿದ್ದೇನೆ. ಏಕೆಂದರೆ ಜೀವ ಉಳಿಸುವ ಲಸಿಕೆಯನ್ನ ಖರೀದಿ ಮಾಡಲಾಗದ ಅನೇಕರು ನಮ್ಮಲ್ಲಿದ್ದಾರೆ ಎಂದು ಹೇಳಿದ್ರು.

ಈ ತಿಂಗಳ ಆರಂಭದಲ್ಲಿ ಡ್ರಗ್​ ಕಂಟ್ರೋಲರ್​ ಜನರಲ್​ ಆಫ್​ ಇಂಡಿಯಾ ಕೋ ವ್ಯಾಕ್ಸಿನ್​ ಹಾಗೂ ಕೋವಿಶೀಲ್ಡ್ ಎಂಬ ಎರಡು ಲಸಿಕೆಗಳ ಬಳಕೆಗೆ ಭಾರತದಲ್ಲಿ ತುರ್ತು ಅನುಮೋದನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...