alex Certify ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿಯನ್ನೂ ದಾಟಲ್ಲ: ಚುನಾವಣಾ ಚಾಣಕ್ಯ ಪ್ರಶಾಂತ್‌ ಕಿಶೋರ್ ಸವಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿಯನ್ನೂ ದಾಟಲ್ಲ: ಚುನಾವಣಾ ಚಾಣಕ್ಯ ಪ್ರಶಾಂತ್‌ ಕಿಶೋರ್ ಸವಾಲು

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರಕ್ಕೆ ಕರಡು ಸಿದ್ಧಪಡಿಸಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್​ ಕಿಶೋರ್​, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಫಲಿತಾಂಶ ಪಡೆದರೆ ತಾವು ಟ್ವಿಟರ್​ ಖಾತೆಯನ್ನ ತೊರೆಯುವುದಾಗಿ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಎರಡು ಅಂಕೆ ದಾಟಲು ವಿಫಲವಾಗಲಿದೆ. ಒಂದು ವೇಳೆ ಬಿಜೆಪಿ 2 ಅಂಕೆಯನ್ನ ದಾಟಿದ್ದೇ ಹೌದಾದಲ್ಲಿ ನಾನು ಟ್ವಿಟರ್​ ತೊರೆಯಲಿದ್ದೇನೆ ಎಂದು ಚುನಾವಣಾ ಚಾಣಕ್ಯ ಎಂದೇ ಹೆಸರಾಗಿರುವ ಪ್ರಶಾಂತ್‌ ಕಿಶೋರ್ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಕಲ್ಯಾಣ ಯೋಜನೆಗಳನ್ನ ಮಮತಾ ಬ್ಯಾನರ್ಜಿ ನಿರ್ಬಂಧಿಸಿದ್ದಾರೆ ಎಂದು ಅಮಿತ್​ ಶಾ ಆರೋಪ ಮಾಡಿದ್ದರು. ಮಮತಾ ಬ್ಯಾನರ್ಜಿ ಬಡವರಿಗೆಂದೇ ಇರುವ ಕೇಂದ್ರದ ಯೋಜನೆಗಳನ್ನ ನಿರ್ಬಂಧಿಸಿದ್ದಾರೆ. ರೈತರ ಹಣ, ಆಯುಷ್ಮಾನ್​ ಭಾರತ್​ ಸೇರಿದಂತೆ ಕೇಂದ್ರದ 80 ಯೋಜನೆಗಳನ್ನ ರಾಜ್ಯದಲ್ಲಿ ನಿರ್ಬಂಧಿಸಿದ್ದಾರೆ. ಮುಂದಿನ ವರ್ಷ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಂಗಾಳದ ಜನತೆ ಈ ಎಲ್ಲ ಯೋಜನೆಗಳ ಲಾಭ ಪಡೆಯಲಿದ್ದಾರೆ ಎಂದು ಹೇಳಿದ್ದರು.

PS: Please save this tweet and if BJP does any better I must quit this space!

— Prashant Kishor (@PrashantKishor) December 21, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...