
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಎರಡು ಅಂಕೆ ದಾಟಲು ವಿಫಲವಾಗಲಿದೆ. ಒಂದು ವೇಳೆ ಬಿಜೆಪಿ 2 ಅಂಕೆಯನ್ನ ದಾಟಿದ್ದೇ ಹೌದಾದಲ್ಲಿ ನಾನು ಟ್ವಿಟರ್ ತೊರೆಯಲಿದ್ದೇನೆ ಎಂದು ಚುನಾವಣಾ ಚಾಣಕ್ಯ ಎಂದೇ ಹೆಸರಾಗಿರುವ ಪ್ರಶಾಂತ್ ಕಿಶೋರ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಕಲ್ಯಾಣ ಯೋಜನೆಗಳನ್ನ ಮಮತಾ ಬ್ಯಾನರ್ಜಿ ನಿರ್ಬಂಧಿಸಿದ್ದಾರೆ ಎಂದು ಅಮಿತ್ ಶಾ ಆರೋಪ ಮಾಡಿದ್ದರು. ಮಮತಾ ಬ್ಯಾನರ್ಜಿ ಬಡವರಿಗೆಂದೇ ಇರುವ ಕೇಂದ್ರದ ಯೋಜನೆಗಳನ್ನ ನಿರ್ಬಂಧಿಸಿದ್ದಾರೆ. ರೈತರ ಹಣ, ಆಯುಷ್ಮಾನ್ ಭಾರತ್ ಸೇರಿದಂತೆ ಕೇಂದ್ರದ 80 ಯೋಜನೆಗಳನ್ನ ರಾಜ್ಯದಲ್ಲಿ ನಿರ್ಬಂಧಿಸಿದ್ದಾರೆ. ಮುಂದಿನ ವರ್ಷ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಂಗಾಳದ ಜನತೆ ಈ ಎಲ್ಲ ಯೋಜನೆಗಳ ಲಾಭ ಪಡೆಯಲಿದ್ದಾರೆ ಎಂದು ಹೇಳಿದ್ದರು.