ಡಿಸೆಂಬರ್ 2019ರಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಸ್ ಇದೀಗ ವಿಶ್ವವನ್ನೇ ನಲುಗಿಸಿದೆ. ಈಗಾಗಲೇ ಕೊರೊನಾ ವೈರಸ್ನ್ನ ನಾಶ ಮಾಡಬೇಕು ಅಂತಾ ವಿಶ್ವದ ಅನೇಕ ರಾಷ್ಟ್ರಗಳು ಕೊರೊನಾ ಲಸಿಕೆಯನ್ನ ಅಭಿವೃದ್ಧಿಪಡಿಸುತ್ತಿವೆ.
ಈ ಲಸಿಕೆಗಳು ದೇಹದ ಜೀವನಿರೋಧಕ ಶಕ್ತಿಯನ್ನ ಹೆಚ್ಚಿಸುವ ಕಾರ್ಯವನ್ನ ಮಾಡುತ್ತವೆ. ಈ ಲಸಿಕೆ ವೈರಸ್ನ್ನ ಗುರಿಯಾಗಿಸಿ ಅದರ ವಿರುದ್ಧ ಹೋರಾಟ ನಡೆಸಿ ನಾಶ ಮಾಡುವಂತೆ ಮಾಡುತ್ತವೆ. ಈ ಮೂಲಕ ಅನಾರೋಗ್ಯವನ್ನ ತಡೆಯುವಂತೆ ಮಾಡುವ ಕೆಲಸವನ್ನ ಮಾಡುತ್ತವೆ.
ವರದಿಗಳ ಪ್ರಕಾರ ಇಲ್ಲಿಯವರೆಗೆ ಪ್ರಾಯೋಗಿಕ ಹಂತದಲ್ಲಿರುವ ಕೊರೊನಾ ಲಸಿಕೆಗಳು ಯಾವುದೇ ಪ್ರತಿಕೂಲ ಘಟನೆಗಳಿಗೆ ಕಾರಣವಾಗಿಲ್ಲ. ಆದರೂ ಕೂಡ ಕೊರೊನಾ ಲಸಿಕೆ ಪ್ರಯೋಗದ ವೇಳೆ ಸೋಂಕಿತರಲ್ಲಿ ನೋವು, ಜ್ವರ, ದೌರ್ಬಲ್ಯ, ಆಯಾಸ ಹಾಗೂ ತಲೆನೋವಿನಂತ ಸಣ್ಣ ಪರಿಣಾಮಗಳನ್ನ ತೋರಿಸಿದೆ. ಹೀಗಾಗಿ ಕೊರೊನಾ ಲಸಿಕೆಗಳ ಮೇಲೆ ಭರವಸೆ ಮೂಡಿದೆ.