alex Certify ಖಾಲಿ ಹೊಟ್ಟೆಯಲ್ಲಿ ಕರಬೂಜ ಸೇವನೆ ಅಪಾಯಕಾರಿಯೇ ? ಬೆಳಗಿನ ಉಪಾಹಾರದಲ್ಲಿ ಸೇರಿಸಿಕೊಳ್ಳುವ ಮೊದಲು ನಿಮಗಿದು ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಲಿ ಹೊಟ್ಟೆಯಲ್ಲಿ ಕರಬೂಜ ಸೇವನೆ ಅಪಾಯಕಾರಿಯೇ ? ಬೆಳಗಿನ ಉಪಾಹಾರದಲ್ಲಿ ಸೇರಿಸಿಕೊಳ್ಳುವ ಮೊದಲು ನಿಮಗಿದು ತಿಳಿದಿರಲಿ

ಕರಬೂಜ ಅಥವಾ ಮಸ್ಕ್‌ ಮೆಲನ್‌ ಆರೋಗ್ಯಕ್ಕೆ ಒಳ್ಳೆಯದು. ಬೇಸಿಗೆಯಲ್ಲಿ ಈ ಹಣ್ಣನ್ನು ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಆದರೆ ಕರಬೂಜವನ್ನು ಯಾವ ಸಮಯದಲ್ಲಿ ತಿನ್ನಬಹುದು ಎಂಬುದನ್ನು ತಿಳಿದುಕೊಳ್ಳದೇ ಇದ್ದಲ್ಲಿ ಆರೋಗ್ಯಕ್ಕೆ ತೊಂದರೆಯೂ ಆಗಬಹುದು.

ಸಾಮಾನ್ಯವಾಗಿ ಬೆಳಗ್ಗೆ ತಿಂಡಿ ಜೊತೆಗೆ ಕರಬೂಜ ಸೇವನೆ ಮಾಡೋದನ್ನು ನೋಡಿರ್ತೀರಾ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಬಹುದೇ ಅನ್ನೋ ಪ್ರಶ್ನೆ ನಮ್ಮನ್ನು ಕಾಡುತ್ತದೆ.

ಕರಬೂಜ ಹಣ್ಣಿನಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದರಲ್ಲಿ ಶೇ. 90ರಷ್ಟು ನೀರಿನ ಅಂಶವೇ ಇದೆ. ಹಾಗಾಗಿ ಬೇಸಿಗೆಗೆ ಇದು ಹೇಳಿ ಮಾಡಿಸಿದಂತಹ ಹಣ್ಣು. ದೇಹವನ್ನು ಹೈಡ್ರೇಟ್‌ ಆಗಿ, ತಂಪಾಗಿಡಲು ಇದು ಸಹಕರಿಸುತ್ತದೆ. ಅನೇಕ ರೋಗಗಳನ್ನು ವಾಸಿ ಮಾಡುವ ಶಕ್ತಿ ಕೂಡ ಇದರಲ್ಲಿದೆ.

ಆದ್ರೆ ಬೆಳಗ್ಗೆ ಕರಬೂಜ ಹಣ್ಣನ್ನು ಸೇವನೆ ಮಾಡುವುದು ಸೂಕ್ತವಲ್ಲ. ಇದನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಉದರ ಬಾಧೆಗಳು ಶುರುವಾಗುವ ಅಪಾಯವಿರುತ್ತದೆ. ಕಲ್ಲಂಗಡಿ ಸೇವನೆಯು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ದೂರವಿರಬಹುದು.

ಕರಬೂಜದಲ್ಲಿ ಫೈಬರ್‌ ಅಂಶವಿದೆ, ಹಾಗಾಗಿ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೂ ಇದು ಉಪಯುಕ್ತವಾಗಿದೆ. ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳುವ ಇಚ್ಛೆಯಿದ್ದರೆ ನಿಮ್ಮ ಡಯಟ್‌ನಲ್ಲಿ ಕರಬೂಜವನ್ನು ಸೇರಿಸಿಕೊಳ್ಳಬೇಕು. ಇದು ಚರ್ಮದ ಆರೋಗ್ಯಕ್ಕೂ ಬೇಕು.

ಕರಬೂಜ ಹಣ್ಣಿನ ಸೇವನೆಯಿಂದ ಚರ್ಮಕ್ಕೆ ಹೊಳಪು ಬರುತ್ತದೆ. ದೃಷ್ಟಿಶಕ್ತಿಯೂ ಹೆಚ್ಚಾಗುತ್ತದೆ. ಹಾಗಂತ ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಕರಬೂಜ ಹಣ್ಣನ್ನು ತಿನ್ನಬಾರದು. ಮಧ್ಯಾಹ್ನದ ಸಮಯದಲ್ಲಿ ಇದನ್ನು ಸೇವನೆ ಮಾಡುವುದು ಉತ್ತಮ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...