ಅಪರೂಪದ ಜಾತಿಯ ಮುಳ್ಳು ಹಂದಿಯೊಂದನ್ನು ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ರಕ್ಷಿಸಲಾಗಿದೆ. ಈ ಮುಳ್ಳುಹಂದಿಯನ್ನು Wildlife Rescue Trust ಹೆಸರಿನ ಎನ್‌ಜಿಓ ಒಂದು ರಕ್ಷಣೆ ಮಾಡಿದೆ.
ಮುಳ್ಳುಹಂದಿಯನ್ನು ಅರಣ್ಯ ಇಲಾಖೆಗೆ ಸುರಕ್ಷಿತವಾಗಿ ಒಪ್ಪಿಸಲಾಗಿದೆ. ಕಡೆಯ ಬಾರಿ ಇದೇ ಜಾತಿಯ ಜೀವಿಯನ್ನು 2007ರಲ್ಲಿ ನೋಡಲಾಗಿತ್ತು ಎಂದು ಎನ್‌ಜಿಒ ಅಧ್ಯಕ್ಷ ಅರವಿಂದ್ ಪವಾರ್ ತಿಳಿಸಿದ್ದಾರೆ.
ಕಳೆದ ವಾರ, ಎಂಟು ಅಡಿ ಉದ್ದದ ಮೊಸಳೆಯೊಂದನ್ನು ವಡೋದರಾದ ವಸತಿ ಪ್ರದೇಶವೊಂದರಲ್ಲಿ ಹಿಡಿದು ರಕ್ಷಿಸಲಾಗಿದೆ.