ಜಗತ್ತಿನ 7ನೇ ಅತಿದೊಡ್ಡ ಆನ್‌ಲೈನ್ ಜ್ಞಾನತಾಣ ಎನಿಸಿರುವ ವಿಕಿಪೀಡಿಯಾ ಪ್ರತಿಷ್ಠಾನ (ಡಬ್ಲ್ಯುಎಂಎಫ್)ವು ಭಾರತೀಯರಿಂದ 150 ರೂಪಾಯಿ ದೇಣಿಗೆ ಕೇಳಿದೆ.
ಗೂಗಲ್ ನಲ್ಲಿ ಯಾವುದೇ ವ್ಯಕ್ತಿ, ಸ್ಥಳ, ಪ್ರಾಣಿ, ಪಕ್ಷಿ ಬಗ್ಗೆ ಮಾಹಿತಿ ಕೇಳಿದರೂ ಸಿಗುವುದು ವಿಕಿಪೀಡಿಯಾದಲ್ಲಿಯೇ. ಈ ಜ್ಞಾನತಾಣ ನಡೆಸುತ್ತಿರುವ ವಿಕಿಪೀಡಿಯಾ ಪ್ರತಿಷ್ಠಾನ ಸಂಕಷ್ಟಕ್ಕೆ ಸಿಲುಕಿದ್ದು, ಭಾರತೀಯ ಓದುಗರು ತಲಾ 150 ರೂ. ದೇಣಿಗೆ ನೀಡುವಂತೆ ಕೋರಿದೆ.
ವಿಕಿಪೀಡಿಯಾದ ಮಾಹಿತಿ ಪಡೆದ ಜಗತ್ತಿನ ಅನೇಕರು ಎಷ್ಟೋ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ, ಪ್ರತಿ ಕೆಲಸಕ್ಕೂ ಮಾರ್ಗದರ್ಶನ ಪಡೆದಿದ್ದಾರೆ. ಎಲ್ಲವನ್ನೂ ಉಚಿತವಾಗಿ ನೀಡುತ್ತಿದ್ದ ವಿಕಿಪೀಡಿಯಾ ಈ ಹಿಂದೆ ಕೂಡ ದೇಣಿಗೆ ಕೇಳಿತ್ತು. ಇದೀಗ ವರ್ಷಕ್ಕೆ 150 ರೂ. ಪಾವತಿಸುವಂತೆ ಬೇಡಿಕೆ ಇಟ್ಟಿದ್ದು, ಓದುಗರಿಗೆ ಇದು ದೊಡ್ಡ ಮೊತ್ತವೇನಲ್ಲ. ಹೀಗಾಗಿ ಹೆಚ್ಚು ಸಂಗ್ರಹಣೆಯ ನಿರೀಕ್ಷೆಯೂ ಇದೆ.