alex Certify ಮನೆಗೆ ಬಂದ ಪತಿ ಕಣ್ಣಿಗೆ ಬಿತ್ತು ಪ್ರೇಮಿ ಜೊತೆ ಪತ್ನಿಯ ರಾಸಲೀಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ಬಂದ ಪತಿ ಕಣ್ಣಿಗೆ ಬಿತ್ತು ಪ್ರೇಮಿ ಜೊತೆ ಪತ್ನಿಯ ರಾಸಲೀಲೆ

ಬಿಹಾರದ ನಳಂದದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ದೆಹಲಿಯಿಂದ ಮನೆಗೆ ಬಂದ ಪತಿಗೆ ಪತ್ನಿಯ ಮೋಸ ಗೊತ್ತಾಗಿದೆ. ಸಿಟ್ಟಿಗೆದ್ದ ಪತಿ, ಪತ್ನಿ ಹಾಗೂ ಪ್ರೇಮಿಯನ್ನು ಹತ್ಯೆಗೈದಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿ ಪತಿ ಸಬ್ಲು ಕುಮಾರ್ ದೆಹಲಿಯಲ್ಲಿ ಕೆಲಸ ಮಾಡ್ತಿದ್ದ. ನಳಂದದಲ್ಲಿ ವಾಸವಾಗಿದ್ದ ರೇಖಾಗೆ ಪರ ಪುರುಷನ ಜೊತೆ ಸಂಬಂಧವಿತ್ತು. ಆಕೆ ತವರಿನವಾನಾದ ಯುವಕನ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಳು. ಬೆಳಿಗ್ಗೆ ಪತ್ನಿಗೆ ಸರ್ಪ್ರೈಸ್ ಕೊಡಲು ಸಬ್ಲು ಕುಮಾರ್ ಮನೆಗೆ ಬಂದಿದ್ದಾನೆ. ಆದ್ರೆ ತುಂಬಾ ಸಮಯವಾದ್ರೂ ಮನೆ ಬಾಗಿಲು ತೆರೆಯಲಿಲ್ಲ. ಅನುಮಾನಗೊಂಡ ಸಬ್ಲು ಹಿಂದಿನ ಬಾಗಿಲಿನಿಂದ ಮನೆಯೊಳಗೆ ಹೋಗಿದ್ದಾನೆ.

ಅಲ್ಲಿ ನೋಡಿದ ದೃಶ್ಯ ಆತನ ಕೋಪವನ್ನು ನೆತ್ತಿಗೇರಿಸಿದೆ. ಪ್ರೇಮಿ ಜೊತೆ ಮಲಗಿದ್ದ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ನಂತ್ರ ಪ್ರೇಮಿ ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಅನುಮಾನಗೊಂಡ ಅಕ್ಕಪಕ್ಕದವರು ಮನೆಗೆ ಹೋದಾಗ ಸತ್ಯ ಗೊತ್ತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...