alex Certify ಲಾಕ್ಡೌನ್ ನಿಂದಾಗಿ ತವರಲ್ಲೇ ಲಾಕ್ ಆದ ಪತ್ನಿ, ಇದೇ ಗ್ಯಾಪ್ ನಲ್ಲಿ ಮದುವೆಯಾಗಿ ಪತಿಯ ಹಳೆ ಲವ್ವರ್ ಮನೆಗೆ ಎಂಟ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ಡೌನ್ ನಿಂದಾಗಿ ತವರಲ್ಲೇ ಲಾಕ್ ಆದ ಪತ್ನಿ, ಇದೇ ಗ್ಯಾಪ್ ನಲ್ಲಿ ಮದುವೆಯಾಗಿ ಪತಿಯ ಹಳೆ ಲವ್ವರ್ ಮನೆಗೆ ಎಂಟ್ರಿ

ಲಾಕ್ ಡೌನ್ ಜಾರಿಯಾಗಿದ್ದರಿಂದ ತವರಿಗೆ ಹೋದ ಪತ್ನಿ ಅಲ್ಲೇ ಉಳಿದುಕೊಂಡಿದ್ದಾಳೆ. ಇದೇ ಗ್ಯಾಪ್ ನಲ್ಲಿ ಪತಿರಾಯ ತನ್ನ ಮಾಜಿ ಪ್ರೇಯಸಿಯನ್ನು ಮದುವೆಯಾಗಿದ್ದಾನೆ.

ಬಿಹಾರದ ಪಾಟ್ನಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಭರತ್ ಪುರದ ಧೀರಜ್ ಕುಮಾರ್ ಮತ್ತು ಪಾಲಿಗಂಜ್ ನ ಗುಡಿಯಾದೇವಿ ದಂಪತಿಗೆ 10 ವರ್ಷದ ಮಗನಿದ್ದಾನೆ. ಲಾಕ್ಡೌನ್ ಜಾರಿಯಾಗುವ ಮೊದಲೇ ಗುಡಿಯಾದೇವಿ ಪಾಟ್ನಾ ಜಿಲ್ಲೆಯ ಪಾಲಿಗಂಜ್ ನಲ್ಲಿದ್ದ ತನ್ನ ತವರು ಮನೆಗೆ ಹೋಗಿದ್ದಾಳೆ.

ಲಾಕ್ಡೌನ್ ಜಾರಿಯಾದ ನಂತರ ಆಕೆಗೆ ಗಂಡನ ಮನೆಗೆ ಹೋಗಲು ಸಾಧ್ಯವಾಗಿಲ್ಲ. ಹೇಗಾದರೂ ಮಾಡಿ ಮನೆಗೆ ಬರುವಂತೆ ಭರತ್ ಪುರದಲ್ಲಿದ್ದ ಗಂಡ ಧೀರಜ್ ಕುಮಾರ್ ಬಲವಂತ ಮಾಡಿದ್ದಾನೆ. ಆದರೆ ಆಕೆಗೆ ಬರಲು ಸಾಧ್ಯವಾಗಿರಲಿಲ್ಲ. ಇದರಿಂದ ಕೋಪಗೊಂಡ ಧೀರಜ್ ಕುಮಾರ್ ರಘುನಾಥಪುರದಲ್ಲಿದ್ದ ತನ್ನ ಮಾಜಿ ಪ್ರೇಯಸಿಯನ್ನೇ ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದಾನೆ.

ಈ ಮಾಹಿತಿ ತಿಳಿದು ಕಂಗಾಲಾದ ಗುಡಿಯಾದೇವಿ ಪಾಲಿಗಂಜ್ ನ ದುಲ್ಹಾನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...