alex Certify ಲೈಂಗಿಕ ಸಂಪರ್ಕ ಬೆಳೆಸದ ಪತಿ ವಿರುದ್ಧ​ ಠಾಣೆ ಮೆಟ್ಟಿಲೇರಿದ ಪತ್ನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಂಗಿಕ ಸಂಪರ್ಕ ಬೆಳೆಸದ ಪತಿ ವಿರುದ್ಧ​ ಠಾಣೆ ಮೆಟ್ಟಿಲೇರಿದ ಪತ್ನಿ..!

ಅಹಮದಾಬಾದ್​ನ 26 ವರ್ಷದ ಮಹಿಳೆ ತನ್ನ ಪತಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಹೊಂದಿಲ್ಲ ಎಂದು ಆರೋಪಿಸಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ. ಮಾತ್ರವಲ್ಲದೇ ಈ ವಿಚಾರವಾಗಿ ತಾನು ಧ್ವನಿ ಎತ್ತಿದಾಗ ನನ್ನ ಅತ್ತೆ ಹಾಗೂ ಮಾವ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಅಂತಲೂ ಮಹಿಳೆ ದೂರನ್ನ ದಾಖಲಿಸಿದ್ದಾಳೆ.

ಬ್ಯಾಂಕ್​ ಉದ್ಯೋಗಿ ಆಗಿರುವ ಮಹಿಳೆ, 2018ರಲ್ಲಿ ಆರೋಪಿಯನ್ನ ಮದುವೆಯಾಗಿದ್ದೆ, ಹಾಗೂ ಆತ ಈವರೆಗೆ ತನ್ನ ಜೊತೆ ಯಾವುದೇ ರೀತಿಯ ಲೈಂಗಿಕ ಸಂಪರ್ಕ ಹೊಂದಿಲ್ಲ ಎಂದು ಮಹಿಳಾ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾಳೆ.

ಈ ದಂಪತಿ ಹನಿಮೂನ್​ಗೆಂದು ಥೈಲ್ಯಾಂಡ್​ಗೆ ಹೋದ ಸಂದರ್ಭದಲ್ಲೂ ಪತಿರಾಯ ಲೈಂಗಿಕ ಸಂಪರ್ಕಕ್ಕೆ ನಿರಾಕರಿಸಿದ್ದಾನೆ. ಪತಿಗೆ ಲೈಂಗಿಕ ಆಸಕ್ತಿ ಬರುವಂತೆ ಮಾಡುವ ಔಷಧಿಗಳನ್ನ ನೀಡಿದ ಬಳಿಕವೂ ಆತ ಸಂಭೋಗ ನಡೆಸಲು ವಿಫಲನಾಗಿದ್ದಾನೆ ಅನ್ನೋದು ಸಂತ್ರಸ್ತೆಯ ಆರೋಪವಾಗಿದೆ.

ಈ ವಿಚಾರವಾಗಿ ನಾನು ಅತ್ತೆ – ಮಾವನೊಂದಿಗೆ ಮಾತನಾಡಲು ಹೋದಾಗ ಅವರು ನನ್ನನ್ನೇ ದೂಷಿಸಿದ್ದಾರೆ. ಮಾತ್ರವಲ್ಲದೇ ಹಲ್ಲೆಗೂ ಯತ್ನಿಸಿದ್ದಾರೆ ಎಂದು ಆಕೆ ಎಫ್​ಐಆರ್​ನಲ್ಲಿ ಆರೋಪಿಸಿದ್ದಾಳೆ. ಬಾಲ್ಯದಲ್ಲಾದ ಅಪಘಾತದಿಂದ ಪತಿಯ ಖಾಸಗಿ ಭಾಗಕ್ಕೆ ಹೊಡೆತ ಬಿದ್ದಿತ್ತು. ಇದರಿಂದ ಆತ ಲೈಂಗಿಕ ಕ್ರಿಯೆ ನಡೆಸಲು ವಿಫಲನಾಗಿರಬಹುದು. ಆದರೆ ಮದುವೆ ವೇಳೆ ತನ್ನಿಂದ ಈ ಎಲ್ಲ ವಿಚಾರಗಳನ್ನ ಮರೆಮಾಚಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...