ಅಹಮದಾಬಾದ್ನ 26 ವರ್ಷದ ಮಹಿಳೆ ತನ್ನ ಪತಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಹೊಂದಿಲ್ಲ ಎಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಮಾತ್ರವಲ್ಲದೇ ಈ ವಿಚಾರವಾಗಿ ತಾನು ಧ್ವನಿ ಎತ್ತಿದಾಗ ನನ್ನ ಅತ್ತೆ ಹಾಗೂ ಮಾವ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಅಂತಲೂ ಮಹಿಳೆ ದೂರನ್ನ ದಾಖಲಿಸಿದ್ದಾಳೆ.
ಬ್ಯಾಂಕ್ ಉದ್ಯೋಗಿ ಆಗಿರುವ ಮಹಿಳೆ, 2018ರಲ್ಲಿ ಆರೋಪಿಯನ್ನ ಮದುವೆಯಾಗಿದ್ದೆ, ಹಾಗೂ ಆತ ಈವರೆಗೆ ತನ್ನ ಜೊತೆ ಯಾವುದೇ ರೀತಿಯ ಲೈಂಗಿಕ ಸಂಪರ್ಕ ಹೊಂದಿಲ್ಲ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾಳೆ.
ಈ ದಂಪತಿ ಹನಿಮೂನ್ಗೆಂದು ಥೈಲ್ಯಾಂಡ್ಗೆ ಹೋದ ಸಂದರ್ಭದಲ್ಲೂ ಪತಿರಾಯ ಲೈಂಗಿಕ ಸಂಪರ್ಕಕ್ಕೆ ನಿರಾಕರಿಸಿದ್ದಾನೆ. ಪತಿಗೆ ಲೈಂಗಿಕ ಆಸಕ್ತಿ ಬರುವಂತೆ ಮಾಡುವ ಔಷಧಿಗಳನ್ನ ನೀಡಿದ ಬಳಿಕವೂ ಆತ ಸಂಭೋಗ ನಡೆಸಲು ವಿಫಲನಾಗಿದ್ದಾನೆ ಅನ್ನೋದು ಸಂತ್ರಸ್ತೆಯ ಆರೋಪವಾಗಿದೆ.
ಈ ವಿಚಾರವಾಗಿ ನಾನು ಅತ್ತೆ – ಮಾವನೊಂದಿಗೆ ಮಾತನಾಡಲು ಹೋದಾಗ ಅವರು ನನ್ನನ್ನೇ ದೂಷಿಸಿದ್ದಾರೆ. ಮಾತ್ರವಲ್ಲದೇ ಹಲ್ಲೆಗೂ ಯತ್ನಿಸಿದ್ದಾರೆ ಎಂದು ಆಕೆ ಎಫ್ಐಆರ್ನಲ್ಲಿ ಆರೋಪಿಸಿದ್ದಾಳೆ. ಬಾಲ್ಯದಲ್ಲಾದ ಅಪಘಾತದಿಂದ ಪತಿಯ ಖಾಸಗಿ ಭಾಗಕ್ಕೆ ಹೊಡೆತ ಬಿದ್ದಿತ್ತು. ಇದರಿಂದ ಆತ ಲೈಂಗಿಕ ಕ್ರಿಯೆ ನಡೆಸಲು ವಿಫಲನಾಗಿರಬಹುದು. ಆದರೆ ಮದುವೆ ವೇಳೆ ತನ್ನಿಂದ ಈ ಎಲ್ಲ ವಿಚಾರಗಳನ್ನ ಮರೆಮಾಚಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.