alex Certify ಸ್ಟ್ರಾ ಮತ್ತು ಸಿಪ್ಪರ್‌ ಸ್ಕ್ರೀನ್ ‌ಶಾಟ್ ಹಾಕಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟ್ರಾ ಮತ್ತು ಸಿಪ್ಪರ್‌ ಸ್ಕ್ರೀನ್ ‌ಶಾಟ್ ಹಾಕಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ

ಶುಕ್ರವಾರದಂದು ಬಹಳಷ್ಟು ನೆಟ್ಟಿಗರು ತಂತಮ್ಮ ಪ್ರೊಫೈಲ್‌ಗಳ ಮೇಲೆ ಸ್ಟ್ರಾ ಹಾಗೂ ಸಿಪ್ಪರ್‌ಗಳಿಗೆ ಆರ್ಡರ್‌ ಮಾಡಿರುವ ವಿವರಗಳಿರುವ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಆರ್ಡರ್‌ಗಳ ವಿಳಾಸವು ರಾಷ್ಟ್ರೀಯ ತನಿಖಾ ದಳದ ಮುಂಬಯಿ ಕಚೇರಿಯ್ದಾಗಿದೆ.

ಈ ಎಲ್ಲಾ ಆರ್ಡರ್‌ಗಳ ಮೂಲಕ ಬುಡಕಟ್ಟು ಕಾರ್ಯಕರ್ತ ಹಾಗೂ ಜೆಸುಯಿಟ್ ಪ್ರೀಸ್ಟ್‌ ಸ್ಟಾನ್ ಸ್ವಾಮಿ ಅವರ ಬಂಧನವನ್ನು ಈ ನೆಟ್ಟಿಗರು ವಿರೋಧಿಸುತ್ತಿದ್ದಾರೆ. ಸ್ವಾಮಿ ಅವರಿಗೆ ಸ್ಟ್ರಾ ಹಾಗೂ ಸಿಪ್ಪರ್‌ಗಳನ್ನು ಎನ್‌ಐಎ ನೀಡುತ್ತಿಲ್ಲ ಎಂದು ಆಪಾದಿಸಿ ಈ ನೆಟ್ಟಿಗರು ಈ ರೀತಿ ಪ್ರತಿಭಟನೆ ಮಾಡಿದ್ದಾರೆ.

ಎಲ್ಗರ್‌ ಪರಿಶದ್‌ ಪ್ರಕರಣದಲ್ಲಿ ಸ್ವಾಮಿಯನ್ನು ಅಕ್ಟೋಬರ್‌ 8ರಂದು ಬಂಧಿಸಲಾಗಿದ್ದು ಅವರೀಗ ಮುಂಬಯಿಯ ತಲೋಜಾ ಜೈಲಿನಲ್ಲಿದ್ದಾರೆ. ತಮಗೆ ಪಾರ್ಕಿನ್ಸಸ್ ಕಾಯಿಲೆ ಇರುವ ಕಾರಣ ಸ್ವಾಮಿ ಸ್ಟ್ರಾ ಹಾಗೂ ಸಿಪ್ಪರ್‌ಗಳನ್ನು ಕೊಡುವಂತೆ ಕೋರಿಕೊಂಡಿದ್ದರು.

ಕೋರ್ಟ್‌ನಲ್ಲಿ ಸ್ವಾಮಿ ವಿಚಾರಣೆ ಸಂದರ್ಭದಲ್ಲಿ ಈ ಬಗ್ಗೆ ಸ್ಪಷ್ಟನೆ ಕೊಟ್ಟ ಎನ್‌ಐಎ, ಸ್ವಾಮಿ ಅವರಿಂದ ತಾನು ಸ್ಟ್ರಾ ಹಾಗೂ ಸಿಪ್ಪರ್‌ಗಳನ್ನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.

November 27, 2020Press ReleaseThe National Platform for the Rights of the Disabled (NPRD) expresses its outrage at…

Posted by Nprd India on Friday, November 27, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...