ಶುಕ್ರವಾರದಂದು ಬಹಳಷ್ಟು ನೆಟ್ಟಿಗರು ತಂತಮ್ಮ ಪ್ರೊಫೈಲ್‌ಗಳ ಮೇಲೆ ಸ್ಟ್ರಾ ಹಾಗೂ ಸಿಪ್ಪರ್‌ಗಳಿಗೆ ಆರ್ಡರ್ ಮಾಡಿರುವ ವಿವರಗಳಿರುವ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಆರ್ಡರ್‌ಗಳ ವಿಳಾಸವು ರಾಷ್ಟ್ರೀಯ ತನಿಖಾ ದಳದ ಮುಂಬಯಿ ಕಚೇರಿಯ್ದಾಗಿದೆ.
ಈ ಎಲ್ಲಾ ಆರ್ಡರ್‌ಗಳ ಮೂಲಕ ಬುಡಕಟ್ಟು ಕಾರ್ಯಕರ್ತ ಹಾಗೂ ಜೆಸುಯಿಟ್ ಪ್ರೀಸ್ಟ್ ಸ್ಟಾನ್ ಸ್ವಾಮಿ ಅವರ ಬಂಧನವನ್ನು ಈ ನೆಟ್ಟಿಗರು ವಿರೋಧಿಸುತ್ತಿದ್ದಾರೆ. ಸ್ವಾಮಿ ಅವರಿಗೆ ಸ್ಟ್ರಾ ಹಾಗೂ ಸಿಪ್ಪರ್‌ಗಳನ್ನು ಎನ್‌ಐಎ ನೀಡುತ್ತಿಲ್ಲ ಎಂದು ಆಪಾದಿಸಿ ಈ ನೆಟ್ಟಿಗರು ಈ ರೀತಿ ಪ್ರತಿಭಟನೆ ಮಾಡಿದ್ದಾರೆ.
ಎಲ್ಗರ್ ಪರಿಶದ್ ಪ್ರಕರಣದಲ್ಲಿ ಸ್ವಾಮಿಯನ್ನು ಅಕ್ಟೋಬರ್ 8ರಂದು ಬಂಧಿಸಲಾಗಿದ್ದು ಅವರೀಗ ಮುಂಬಯಿಯ ತಲೋಜಾ ಜೈಲಿನಲ್ಲಿದ್ದಾರೆ. ತಮಗೆ ಪಾರ್ಕಿನ್ಸಸ್ ಕಾಯಿಲೆ ಇರುವ ಕಾರಣ ಸ್ವಾಮಿ ಸ್ಟ್ರಾ ಹಾಗೂ ಸಿಪ್ಪರ್‌ಗಳನ್ನು ಕೊಡುವಂತೆ ಕೋರಿಕೊಂಡಿದ್ದರು.
ಕೋರ್ಟ್‌ನಲ್ಲಿ ಸ್ವಾಮಿ ವಿಚಾರಣೆ ಸಂದರ್ಭದಲ್ಲಿ ಈ ಬಗ್ಗೆ ಸ್ಪಷ್ಟನೆ ಕೊಟ್ಟ ಎನ್‌ಐಎ, ಸ್ವಾಮಿ ಅವರಿಂದ ತಾನು ಸ್ಟ್ರಾ ಹಾಗೂ ಸಿಪ್ಪರ್‌ಗಳನ್ನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.
https://www.facebook.com/nprd.india/posts/3415563148550740