alex Certify ವಾರಣಾಸಿಯಲ್ಲಿ ಗಂಗೆ ಹಸಿರಾಗಿ ಕಾಣುತ್ತಿರುವುದೇಕೆ…? ಇಲ್ಲಿದೆ ಇದರ ಹಿಂದಿನ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾರಣಾಸಿಯಲ್ಲಿ ಗಂಗೆ ಹಸಿರಾಗಿ ಕಾಣುತ್ತಿರುವುದೇಕೆ…? ಇಲ್ಲಿದೆ ಇದರ ಹಿಂದಿನ ಕಾರಣ

ವಾರಣಾಸಿಯ ಘಾಟುಗಳಲ್ಲಿ ಗಂಗಾ ನದಿಯ ನೀರು ಹಸಿರಾಗಿ ಕಾಣಿಸಲು ಆರಂಭಗೊಂದು ದಿನಗಳು ಉರುಳಿವೆ. ನದಿ ನೀರಿನ ಬಣ್ಣದಲ್ಲಿ ಈ ಬದಲಾವಣೆ ಆಗಿರುವುದು ಸ್ಥಳೀಯರಿಗೆ ಚಿಂತೆ ಮಾಡುವ ವಿಚಾರವಾಗಿದೆ. ಕೋವಿಡ್ ಲಾಕ್‌ಡೌನ್ ಕಾರಣದಿಂದ ಕಳೆದ ವರ್ಷ ಇದೇ ವೇಳೆಗೆ ಗಂಗಾ ನದಿಯ ನೀರು ಶುದ್ಧಗೊಂಡು ಸ್ಪಟಿಕದಂತೆ ಗೋಚರಿಸುತ್ತಿತ್ತು.

ಮೈಕ್ರೋಸೈಟಿಸ್ ಅಲ್ಗೇಯ ಕಾರಣದಿಂದಾಗಿ ಗಂಗಾ ನದಿಯ ನೀರು ಹೀಗೆ ಹಸಿರಾಗಿ ಕಾಣುತ್ತಿದೆ ಎಂದು ಬನಾರಸ್ ಹಿಂದೂ ವಿವಿಯ ಮಾಳ್ವಿಯಾ ಗಂಗಾ ಸಂಶೋಧನೆ ಕೇಂದ್ರದ ಡಾ. ಬಿ.ಡಿ. ತ್ರಿಪಾಠಿ ತಿಳಿಸಿದ್ದಾರೆ.

ಈ ದೇಶದಲ್ಲಿ ಪತ್ತೆಯಾಗಿದೆ ಭಾರತದ ಹೈಬ್ರಿಡ್​ ಮಾದರಿ ರೂಪಾಂತರಿ ವೈರಸ್……!

“ಈ ಆಲ್ಗೇಗಳನ್ನು ಹರಿಯುವ ನದಿ ನೀರಿನಲ್ಲಿ ಕಾಣಬಹುದಾಗಿದೆ. ಆದರೆ ಗಂಗಾ ನದಿಯಲ್ಲಿ ಇದನ್ನು ಸಾಮಾನ್ಯವಾಗಿ ನೋಡಲು ಬರುವುದಿಲ್ಲ. ಆದರೆ ನದಿ ನೀರು ನಿಂತು ಪೋಷಕಾಂಶಗಳು ಸೃಷ್ಟಿಯಾದ ವೇಳೆ ಮೈಕ್ರೋಸಿಸ್ಟಿಸ್‌ಗಳು ಬೆಳೆಯಲು ಆರಂಭಿಸುತ್ತವೆ. ಇವುಗಳು ಬರೀ ಕೊಳಗಳು ಹಾಗೂ ಕಾಲುವೆಗಳಲ್ಲಿ ಮಾತ್ರವೇ ಬೆಳೆಯುತ್ತವೆ” ಎಂದು ತ್ರಿಪಾಠಿ ತಿಳಿಸಿದ್ದಾರೆ.

ಸಂಭ್ರಮದ ಮದುವೆ ಮನೆಯಲ್ಲಿ ಸೂತಕದ ಛಾಯೆ: ವಿವಾಹವಾದ ನಾಲ್ಕೇ ದಿನಕ್ಕೆ ಕೊರೋನಾಗೆ ಮದುಮಗಳು ಬಲಿ

ಈ ಕುರಿತು ಮಾತನಾಡಿದ ಪರ್ಯಾವರಣ ತಜ್ಞರಾದ ಡಾ. ಕೃಪಾ ರಾಮ್, “ಮಳೆಯಿಂದಾಗಿ ಈ ಆಲ್ಗೇ ನದಿಯಿಂದ ಫಲವತ್ತಾದ ಭೂಮಿಗೆ ಹರಿಯುತ್ತದೆ. ಅಗತ್ಯವಾದ ಪೋಷಕಗಳು ಸಿಕ್ಕ ಬಳಿಕ ಇವು ದ್ಯುತಿಸಂಶ್ಲೇಶಣಾ ಕ್ರಿಯೆ ಆರಂಭಿಸುತ್ತವೆ. ನೀರು ಬಹಳ ಕಾಲದವರೆಗೂ ಹಾಗೇ ನಿಂತರೆ ಮಾತ್ರವೇ ಸೂರ್ಯನ ಕಿರಣಗಳು ಆಳವಾಗಿ ಹೋಗಿ ದ್ಯುತಿಸಂಶ್ಲೇಶಣಾ ಕ್ರಿಯೆ ಆರಂಭಗೊಳ್ಳುತ್ತದೆ” ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...