alex Certify ಇದೆಂಥ ವಿಚಿತ್ರ….! ಮದ್ಯಪಾನ ನಿಷೇಧವಿರುವ ರಾಜ್ಯದಲ್ಲೇ ಅತಿ ಹೆಚ್ಚು ಮದ್ಯ ಸೇವನೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದೆಂಥ ವಿಚಿತ್ರ….! ಮದ್ಯಪಾನ ನಿಷೇಧವಿರುವ ರಾಜ್ಯದಲ್ಲೇ ಅತಿ ಹೆಚ್ಚು ಮದ್ಯ ಸೇವನೆ..!

ಬಿಹಾರದಲ್ಲಿ ನಿತೀಶ್​ ಕುಮಾರ್ ನೇತೃತ್ವದ ಸರ್ಕಾರ 2016ರಲ್ಲೇ ಮದ್ಯಪಾನ ನಿಷೇಧ ಕಾನೂನನ್ನ ಜಾರಿಗೆ ತಂದಿದೆ. ಆದರೆ ವಿಪರ್ಯಾಸ ಏನು ಅಂದರೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ನೀಡಿದ ವರದಿ ಪ್ರಕಾರ ಮದ್ಯಪಾನ ನಿಷೇಧ ಹೊಂದಿರುವ ಬಿಹಾರದಲ್ಲಿ ಮಹಾರಾಷ್ಟ್ರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ಯಪಾನವನ್ನ ಬಳಕೆ ಮಾಡಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.‌

ನಗರ ಪ್ರದೇಶದಲ್ಲಿ 14 ಪ್ರತಿಶತದಷ್ಟು ಪುರುಷರ ಮದ್ಯ ಸೇವನೆ ಮಾಡಿದ್ರೆ, ಗ್ರಾಮೀಣ ಭಾಗದಲ್ಲಿ 15.8 ಪ್ರತಿಶತದಷ್ಟು ಮಂದಿ ಮದ್ಯಪಾನ ಸೇವನೆ ಮಾಡಿದ್ದಾರೆ. ಎಲ್ಲ ರಾಜ್ಯಗಳಲ್ಲಿ ಮದ್ಯಪಾನಕ್ಕೆ ಹೋಲಿಕೆ ಮಾಡಿದ್ರೆ ತಂಬಾಕು ಸೇವನೆ ಮಾಡುವವರ ಸಂಖ್ಯೆಯೇ ಜಾಸ್ತಿ ಇದೆ ಅನ್ನೋದನ್ನ ಈ ವರದಿ ಬಹಿರಂಗ ಪಡಿಸಿದೆ.

ಧೂಮಪಾನಕ್ಕಿಂತಲೂ ಚೂಯಿಂಗ್​ ತಂಬಾಕು ಉತ್ಪನ್ನಗಳನ್ನ ಸೇವನೆ ಮಾಡುವವರ ಸಂಖ್ಯೆಯೇ ಜಾಸ್ತಿಯಂತೆ. ತಂಬಾಕು ಸೇವನೆಯಲ್ಲಿ ಮಿಜೋರಾಂ ಮೊದಲ ಸ್ಥಾನದಲ್ಲಿದ್ದು ಇಲ್ಲಿ 65 ಪ್ರತಿಶತಕ್ಕೂ ಹೆಚ್ಚು ಮಹಿಳೆಯರು ಹಾಗೂ 75 ಪ್ರತಿಶತಕ್ಕೂ ಹೆಚ್ಚು ಪುರುಷರು ತಂಬಾಕು ಸೇವನೆ ಮಾಡುತ್ತಾರಂತೆ. ಕೇರಳ ಹಾಗೂ ಗೋವಾ ತಂಬಾಕು ಸೇವನೆಯಲ್ಲಿ ಕ್ರಮವಾಗಿ ನಂತರದ ಸ್ಥಾನಗಳನ್ನ ಪಡೆದಿವೆ.

ಮದ್ಯಪಾನ ವಿಚಾರದಲ್ಲಿ , ಸಿಕ್ಕಿ ಹಾಗೂ ಆಸ್ಸಾಂನ ಮಹಿಳೆಯರು ಮೊದಲ ಎರಡು ಸ್ಥಾನ ಅಂದರೆ ಕ್ರಮವಾಗಿ 16.2% ಮತ್ತು 7.3%ರಷ್ಟು ಮಂದಿ ಸೇವನೆ ಮಾಡುತ್ತಾರಂತೆ. ಇದರಲ್ಲಿ ಇನ್ನೊಂದು ಕುತೂಹಲಕಾರಿ ವಿಚಾರ ಅಂದರೆ ನಗರ ಪ್ರದೇಶಕ್ಕಿಂತ ಜಾಸ್ತಿ ಗ್ರಾಮೀಣ ಪ್ರದೇಶದವರೇ ಹೆಚ್ಚು ಮದ್ಯಪಾನ ಸೇವಿಸುತ್ತಾರೆ ಎಂದು ವರದಿ ಹೇಳಿದೆ. ಗುಜರಾತ್ ಮತ್ತು ಜಮ್ಮುವಿನಲ್ಲಿ ಕಡಿಮೆ ಮದ್ಯ ಸೇವನೆ ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...