
ಇನ್ನು ಈ ವಿಚಾರವಾಗಿ ಮಾತನಾಡಿದ ಯುವಕರ ಗುಂಪು, ಚೀನಾ ಉತ್ಪನ್ನಗಳನ್ನ ನಿರ್ಬಂಧಿಸಿ ಭಾರತೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ಈ ಪ್ರಯತ್ನ ಮಾಡಿದ್ದೇವೆ ಅಂತಾ ಹೇಳಿದ್ರು.
ಮಿಡ್ನಾಪುರದಲ್ಲಿ ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯುವಕರ ಗುಂಪು ದೀಪಾವಳಿ ಹಬ್ಬವನ್ನ ವಿಶೇಷವಾಗಿ ಆಚರಿಸಲಾಗ್ತಿದೆ. ಅನೇಕ ಕಡೆ ಪಟಾಕಿಗಳ ಬಳಕೆಯನ್ನ ಸ್ವಯಂ ಪ್ರೇರಿತರಾಗಿ ಬ್ಯಾನ್ ಮಾಡಲಾಗಿದೆ.
ಹರಿಯಾಣದಲ್ಲಿ ಕೊರೊನಾದಿಂದಾಗಿ ಅನೇಕರು ತನ್ನ ಕೆಲಸ ಕಳೆದುಕೊಂಡಿದ್ದಾರೆ. ಜೀವನೋಪಾಯಕ್ಕಾಗಿ ಹೋಂ ಮೇಡ್ ಹಣತೆಗಳನ್ನ ನಿರ್ಮಾಣ ಮಾಡ್ತಿದ್ದಾರೆ. ಅದೇ ರೀತಿ ಉತ್ತರ ಪ್ರದೇಶ ಬಾರಾಬಂಕಿ ಜಿಲ್ಲೆಯಲ್ಲೂ ಜನರು ಜೀವನೋಪಾಯಕ್ಕೆ ಇದೇ ಮಾರ್ಗವನ್ನ ಕಂಡುಕೊಂಡಿದ್ದಾರೆ.