alex Certify 3 ಲಕ್ಷ ಬೆಂಕಿಕಡ್ಡಿ ಬಳಸಿ ತಾಜ್‌ ಮಹಲ್ ಸೃಷ್ಟಿಸಿದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ಲಕ್ಷ ಬೆಂಕಿಕಡ್ಡಿ ಬಳಸಿ ತಾಜ್‌ ಮಹಲ್ ಸೃಷ್ಟಿಸಿದ ಯುವತಿ

ಪಶ್ಚಿಮ ಬಂಗಾಳದ 22 ವರ್ಷದ ಯುವತಿಯೊಬ್ಬರು ಮೂರು ಲಕ್ಷಕ್ಕಿಂತ ಹೆಚ್ಚು ಬೆಂಕಿಕಡ್ಡಿಗಳನ್ನು ಬಳಸಿಕೊಂಡು ತಾಜ್‌ಮಹಲ್ ಚಿತ್ರವನ್ನು ಮರುಸೃಷ್ಟಿಸಿದ್ದಾರೆ.

ನಾಡಿಯಾ ಜಿಲ್ಲೆಯ ಕೃಷ್ಣಾನಗರ ಜಿಲ್ಲೆಯ ಈ ಯುವತಿ 4×6 ಅಡಿ ಬೋರ್ಡ್ ಬಳಸಿಕೊಂಡು ಈ ಕಲಾಕೃತಿ ರಚಿಸಿದ್ದಾರೆ. ಇಂಗ್ಲಿಷ್ ಎಂ.ಎ. ವ್ಯಾಸಾಂಗ ಮಾಡುತ್ತಿರುವ ಸಹೇಲಿ ಪಾಲ್‌ ಕೊಲ್ಕತ್ತಾ ವಿವಿ ವಿದ್ಯಾರ್ಥಿನಿಯಾಗಿದ್ದಾರೆ.

ಈ ಹಿಂದೆ ಇರಾನಿನ ಮೇಸಮ್ ರಹಮಾನಿ ಯುನೆಸ್ಕೋದ ಲೋಗೋವನ್ನು 1,36,951 ಕಡ್ಡಿಗಳನ್ನು ಬಳಸಿಕೊಂಡು ಗಿನ್ನೆಸ್ ದಾಖಲೆ ನಿರ್ಮಿಸಿದ್ದರು. ಇದೀಗ ಮೂರು ಲಕ್ಷ ಕಡ್ಡಿಗಳನ್ನು ಬಳಸಿ ರಚಿಸಿದ ಈ ಕಲಾಕೃತಿಯಿಂದ ನೂತನ ಗಿನ್ನೆಸ್ ದಾಖಲೆ ತಮ್ಮದಾಗಬಹುದೆಂಬ ಆಶಯವನ್ನು ಸಹೇಲಿ ಹೊಂದಿದ್ದಾರೆ.

West Bengal's Saheli Pal Creates Taj Mahal Image With Over 3 Lakh  Matchsticks

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...