
ಪಶ್ಚಿಮ ಬಂಗಾಳದ 22 ವರ್ಷದ ಯುವತಿಯೊಬ್ಬರು ಮೂರು ಲಕ್ಷಕ್ಕಿಂತ ಹೆಚ್ಚು ಬೆಂಕಿಕಡ್ಡಿಗಳನ್ನು ಬಳಸಿಕೊಂಡು ತಾಜ್‌ಮಹಲ್ ಚಿತ್ರವನ್ನು ಮರುಸೃಷ್ಟಿಸಿದ್ದಾರೆ.
ನಾಡಿಯಾ ಜಿಲ್ಲೆಯ ಕೃಷ್ಣಾನಗರ ಜಿಲ್ಲೆಯ ಈ ಯುವತಿ 4×6 ಅಡಿ ಬೋರ್ಡ್ ಬಳಸಿಕೊಂಡು ಈ ಕಲಾಕೃತಿ ರಚಿಸಿದ್ದಾರೆ. ಇಂಗ್ಲಿಷ್ ಎಂ.ಎ. ವ್ಯಾಸಾಂಗ ಮಾಡುತ್ತಿರುವ ಸಹೇಲಿ ಪಾಲ್ ಕೊಲ್ಕತ್ತಾ ವಿವಿ ವಿದ್ಯಾರ್ಥಿನಿಯಾಗಿದ್ದಾರೆ.
ಈ ಹಿಂದೆ ಇರಾನಿನ ಮೇಸಮ್ ರಹಮಾನಿ ಯುನೆಸ್ಕೋದ ಲೋಗೋವನ್ನು 1,36,951 ಕಡ್ಡಿಗಳನ್ನು ಬಳಸಿಕೊಂಡು ಗಿನ್ನೆಸ್ ದಾಖಲೆ ನಿರ್ಮಿಸಿದ್ದರು. ಇದೀಗ ಮೂರು ಲಕ್ಷ ಕಡ್ಡಿಗಳನ್ನು ಬಳಸಿ ರಚಿಸಿದ ಈ ಕಲಾಕೃತಿಯಿಂದ ನೂತನ ಗಿನ್ನೆಸ್ ದಾಖಲೆ ತಮ್ಮದಾಗಬಹುದೆಂಬ ಆಶಯವನ್ನು ಸಹೇಲಿ ಹೊಂದಿದ್ದಾರೆ.
