alex Certify ಕಚೇರಿಗೆ ನಿತ್ಯ 15 ಕಿ.ಮೀ. ಗಾಲಿ ಕುರ್ಚಿಯಲ್ಲೇ ಸಂಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಚೇರಿಗೆ ನಿತ್ಯ 15 ಕಿ.ಮೀ. ಗಾಲಿ ಕುರ್ಚಿಯಲ್ಲೇ ಸಂಚಾರ

ವೈಕಲ್ಯ ಎಂಬುದು ದೇಹಕ್ಕೆ ಹೊರತು, ಮನಸಿಗಲ್ಲ. ಇಲ್ಲೊಬ್ಬರಿದ್ದಾರೆ. ಹುಟ್ಟು ಅಂಗವಿಕಲ. ಹಾಗೆಂದು ಸುಮ್ಮನೆ ಕುಳಿತಿಲ್ಲ. ಭೂಗರ್ಭಶಾಸ್ತ್ರದಲ್ಲಿ ಪಿ.ಎಚ್.ಡಿ. ಪದವಿ ಪಡೆದು, ಸರ್ಕಾರಿ ಕೆಲಸವನ್ನೂ ಗಿಟ್ಟಿಸಿದ್ದಾರೆ. ಅಷ್ಟು ಮಾತ್ರವಲ್ಲ ಪ್ರತಿದಿನ ಮನೆಯಿಂದ ಕಚೇರಿಗೆ 15 ಕಿ.ಮೀ. ದೂರವನ್ನು ತಮ್ಮ ಗಾಲಿ ಕುರ್ಚಿಯಲ್ಲೇ ಸಾಗಿ ಸೇರುತ್ತಾರೆ.

ತಮ್ಮ ವೈಕಲ್ಯದ ಬಗ್ಗೆ ಅವರಿಗೆ ಚಿಂತೆ ಇಲ್ಲ.‌ 15 ಕಿ.ಮೀ. ಗಾಲಿಕುರ್ಚಿಯಲ್ಲಿ ಬಂದರೂ ಸುಸ್ತೆಂಬುದಿಲ್ಲ.‌ ವಿರಾಮ ಎಂಬುದಿಲ್ಲ. ಕೆಲಸ….ಕೆಲಸ‌…..ಮುಗಿದ ನಂತರ ಮತ್ತೆ 15 ಕಿ.ಮೀ. ಸಾಗಿ ಮನೆಗೆ ತೆರಳುತ್ತಾರೆ.

ಪಶ್ಚಿಮ ಬಂಗಾಳದ ಝರಗ್ರಾಮದ ಜಿಲ್ಲಾಡಳಿತದಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿರುವ ಜಗನ್ನಾಥ್ ಮಹ್ತೋ (32) ಶಾಲೆ, ಕಾಲೇಜು, ವಿದ್ಯಾಭ್ಯಾಸ ಎಲ್ಲವನ್ನೂ ಇದೇ ಸ್ಥಿತಿಯಲ್ಲಿ ಮಾಡಿದವರು.

ಮಹಡಿ ಮೇಲಿದ್ದ ತರಗತಿಗೆ ತೆವಳಿಕೊಂಡೇ ಹೋದದ್ದಿದೆ. ಕೆಲವೊಮ್ಮೆ ಸ್ನೇಹಿತರು, ಸಿಬ್ಬಂದಿ ಹೊತ್ತೊಯ್ದಿದ್ದಾರೆ. ಪದವಿ ನಂತರ ಪೋಷಕರು, ಹೆಂಡತಿ ಸಂಸಾರ ನೋಡಿಕೊಳ್ಳಲು ಖಾಸಗಿಯಾಗಿ ಮನೆ ಪಾಠ ಮಾಡುತ್ತಿದ್ದ ಮಹ್ತೊ, ಮಕ್ಕಳಿಗಾಗಿ ಪ್ರತಿದಿನ 20 ಕಿ.ಮೀ. ಸಾಗುತ್ತಿದ್ದರು. ಪಿಎಚ್ಡಿ ಮಾಡುವಾಗ ಬರೋಬ್ಬರಿ 55 ಕಿ.ಮೀ. ಸಂಚರಿಸುತ್ತಿದ್ದರು.

2012 ರಲ್ಲಿ ಮಮತಾ ಬ್ಯಾನರ್ಜಿ ಅವರು ಚುನಾವಣೆ ಪ್ರವಾಸ ಕೈಗೊಂಡಿದ್ದ ವೇಳೆ ಅವರನ್ನ ಸ್ವಾಗತಿಸಲು ಗ್ರಾಮದ ಜನರು ಸಿದ್ಧರಾಗಿ ನಿಂತಿದ್ದರು. ಅವರೆಲ್ಲರ ಮಧ್ಯೆ ಮಹ್ತೋ ಕೂಡ ಇದ್ದರು. ಕಾರು ನಿಲ್ಲಿಸಿ, ಕೆಳಗಿಳಿದು ಬಂದ ಮಮತಾ, ಮಹ್ತೋರ ಅಂಗವೈಕಲ್ಯ, ‌ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿದರು. ಅಧಿಕಾರಿಗಳನ್ನ ಕರೆದು ಉದ್ಯೋಗ ನೀಡುವಂತೆ ಸೂಚಿಸಿದರು. ಮನೆಗೆ ಬಂದ ಅಧಿಕಾರಿಗಳು ಮಹ್ತೋ ಅವರ ಪ್ರಮಾಣಪತ್ರಗಳನ್ನು ಪರಿಶೀಲಿಸಿ ತೆರಳಿದ್ದರು.

ಆದರೆ,‌ ಕೆಲಸ ಮಾತ್ರ ಸಿಗಲಿಲ್ಲ. ಮೂರು ವರ್ಷದ ನಂತರ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಮತ್ತೆ ಸಿಎಂ ಮಮತಾ – ಮಹ್ತೋ ಮುಖಾಮುಖಿಯಾದರು. ಆಗ ಹಳೆಯದನ್ನು ನೆನಪಿಸಿದ ಮಹ್ತೋ, ತಮಗಿನ್ನೂ ಕೆಲಸ ಸಿಕ್ಕಿಲ್ಲ ಎಂಬ ಸತ್ಯ ಬಿಚ್ಚಿಟ್ಟರು. ತಕ್ಷಣವೇ ಅವರಿಗೆ ಝರ್ ಗ್ರಾಮ್ ಜಿಲ್ಲಾಡಳಿತದಲ್ಲಿ ಉದ್ಯೋಗ ಸಿಕ್ಕಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...