alex Certify ಮನೆ ಆಹಾರ ಸೇವಿಸಿ 35 ಕೆ.ಜಿ. ತೂಕ ಇಳಿಸಿಕೊಂಡ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಆಹಾರ ಸೇವಿಸಿ 35 ಕೆ.ಜಿ. ತೂಕ ಇಳಿಸಿಕೊಂಡ ಮಹಿಳೆ..!

ಬೊಜ್ಜು ದೇಹದ ಸೌಂದರ್ಯವನ್ನು ಸಂಪೂರ್ಣ ಹಾಳು ಮಾಡುತ್ತದೆ. ಒಮ್ಮೆ ಬಂದ ಬೊಜ್ಜನ್ನು ಕಡಿಮೆ ಮಾಡುವುದು ಸುಲಭದ ಕೆಲಸವಲ್ಲ. ವ್ಯಾಯಾಮ, ಜಿಮ್, ಆಹಾರದಲ್ಲಿ ನಿಯಂತ್ರಣ ಮಾಡಿದ್ರೂ ಕೆಲವರ ಬೊಜ್ಜು ಕರಗುವುದಿಲ್ಲ. ಆದ್ರೆ ಮನೆಯಲ್ಲೇ ಇದ್ದು ಆಹಾರದ ಮೂಲಕವೇ ತೂಕ ಇಳಿಸಿಕೊಳ್ಳಬಹುದು ಎಂಬುದನ್ನು ಮಹಿಳೆಯೊಬ್ಬಳು ಮಾಡಿ ತೋರಿಸಿದ್ದಾಳೆ.

ಫಿಟ್‌ನೆಸ್ ಸಲಹೆಗಾರ್ತಿ ಆಕಾಂಕ್ಷಾ ಶರ್ಮಾ ತೂಕ 90ರ ಗಡಿ ದಾಟಿತ್ತು. ಸ್ಥೂಲಕಾಯದಿಂದ ಬೇಸತ್ತಿದ್ದ ಆಕಾಂಕ್ಷಾ ನೋವಿನಿಂದ ಬಳಲುತ್ತಿದ್ದರು. ಹೆಚ್ಚಿನ ತೂಕವನ್ನು ಇಳಿಸಿಕೊಳ್ಳಲು ನಿರ್ಧರಿಸಿದ ಆಕಾಂಕ್ಷಾ 24 ತಿಂಗಳಲ್ಲಿ 35 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ. ಆಹಾರದಲ್ಲಿ ನಿಯಂತ್ರಣ ಹಾಗೂ ಮಗುವಿನ ಜೊತೆ ಆಟ ನನಗೆ ತೂಕ ಇಳಿಸಿಕೊಳ್ಳಲು ನೆರವಾಯಿತು ಎಂದು ಆಕಾಂಕ್ಷಾ ಹೇಳಿದ್ದಾರೆ.

ಬೆಳಿಗ್ಗೆ ಒಂದು ಕಪ್ ವಾಲ್ನಟ್ಸ್ ಹಾಗೂ ಒಂದು ಕಪ್ ಕಾಫಿ ಸೇವನೆ ಮಾಡ್ತಾರಂತೆ ಆಕಾಂಕ್ಷಾ. ಮಧ್ಯಾಹ್ನ 100 ಗ್ರಾಂ ಪನ್ನೀರ್, 50 ಗ್ರಾಂ ರಾಜ್ಮಾ, 50 ಗ್ರಾಂ ಅನ್ನ ಹಾಗೂ ಹಸಿರು ತರಕಾರಿ ಸೇವನೆ ಮಾಡ್ತಾರಂತೆ. ರಾತ್ರಿ ಸ್ವಲ್ಪ ಕಡಿಮೆ ಸೇವನೆ ಮಾಡುವ ಅವರು ತರಕಾರಿ ಪಲಾವ್, ಒಂದು ಕಪ್ ದಾಲ್ ಹಾಗೂ ತುಪ್ಪದಲ್ಲಿ ಮಾಡಿದ ಅನ್ನ, ಪನ್ನೀರ್ ಬುರ್ಜಿ ಇವುಗಳಲ್ಲಿ ಒಂದನ್ನು ಸೇವಿಸ್ತಾರಂತೆ.

ಇದನ್ನು ಬಿಟ್ಟು ಒಂದು ಕಪ್ ಕಾಫಿ, 100 ಗ್ರಾಂ ಪನ್ನೀರ್ ಅಥವಾ ಟೋಸ್ಟ್ ಸೇವನೆ ಮಾಡ್ತಾರಂತೆ. ಜಿಮ್ ನಲ್ಲಿ ಪ್ರತಿ ದಿನ ವರ್ಕ್ ಔಟ್ ಮಾಡ್ತಿದ್ದವರು ತಮಗೆ ತಾವೇ ಚಾಲೆಂಜ್ ಮಾಡಿಕೊಳ್ತಿದ್ದರಂತೆ. ಒಂದು ದಿನವೂ ವರ್ಕ್ ಔಟ್ ಮಿಸ್ ಮಾಡಿಕೊಳ್ಳದೆ ನಾನು ತೂಕ ಇಳಿಸಿಕೊಳ್ಳಲು ಯಶಸ್ವಿಯಾದೆ ಎಂದು ಆಕಾಂಕ್ಷಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...