alex Certify ಹಿಂದೂ – ಮುಸ್ಲಿಂ ಮದುವೆ ನಿಲ್ಲಿಸಲು ಹೋದ ಪೊಲೀಸರಿಗೇ ಕಾದಿತ್ತು ಶಾಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದೂ – ಮುಸ್ಲಿಂ ಮದುವೆ ನಿಲ್ಲಿಸಲು ಹೋದ ಪೊಲೀಸರಿಗೇ ಕಾದಿತ್ತು ಶಾಕ್​..!

ಲಕ್ನೋದ ದುಡಾ ಕಾಲೋನಿಯಲ್ಲಿ ಮುಸ್ಲಿಂ ವರ ಹಾಗೂ ಹಿಂದೂ ವಧು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದ ವೇಳೆ ಹೊಸ ಮತಾಂತರ ವಿರೋಧಿ ಕಾನೂನಿನ ಕಾರಣವೊಡ್ಡಿ ಪೊಲೀಸರು ಮದುವೆಗೆ ಅಡ್ಡಿಪಡಿಸಿದ್ದಾರೆ.

ಆದರೆ ವಧುವಿನ ತಾಯಿ ಹುಡುಗ – ಹುಡುಗಿ ಇಬ್ಬರೂ 5 ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸಿದ್ದಾರೆ. ಹೀಗಾಗಿ ಈ ಮದುವೆಯನ್ನ ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹೊಸ ಕಾನೂನು ಜಾರಿಯಾಗುವ ಮೊದಲೇ ಈ ಮದುವೆಯನ್ನ ನಿಶ್ಚಯಿಸಲಾಗಿತ್ತು. ಈ ವಿವಾಹಕ್ಕೆ ಅನುಮತಿ ಅಗತ್ಯವೆಂದು ಮೊದಲೇ ತಿಳಿದಿದ್ದರೆ ನಾವು ಆ ಕೆಲಸವನ್ನೂ ಮಾಡ್ತಿದ್ವಿ ಅಂತಾ ಎರಡೂ ಕುಟುಂಬದವರು ಹೇಳಿದ್ದಾರೆ.

ಫಾರ್ಮಾದಲ್ಲಿ ಔಷಧಿಗಾರನಾಗಿ ಕೆಲಸ ಮಾಡುವ ವರ ಈ ವಿಚಾರವಾಗಿ ಮಾತನಾಡಿ, ನಾವು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದೇವೆ. ನಮ್ಮ ನಡುವೆ ಮತಾಂತರದ ವಿಚಾರವೇ ಬಂದಿಲ್ಲ. ನಾವು ಎರಡೂ ಧರ್ಮವನ್ನ ಗೌರವಿಸುತ್ತೇವೆ ಎಂದು ಹೇಳಿದ್ದಾರೆ.

ವಧುವಿನ ತಾಯಿ ಕೂಡ ಈ ವಿಚಾರವಾಗಿ ಮಾತನಾಡುತ್ತಾ, ನಾವು ಬಹಳ ವರ್ಷಗಳಿಂದ ಮುಸ್ಲಿಂ ನೆರೆಹೊರೆಯವರ ಜೊತೆಯೇ ವಾಸ ಮಾಡುತ್ತಿದ್ದೇವೆ. ಹಾಗಾಗಿ ನಮಗೆ ಮುಸ್ಲಿಂ ಧರ್ಮದಿಂದ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ನನ್ನ ಮಗಳು ಮತಾಂತರವಾಗಿಲ್ಲ. ಮುಸ್ಲಿಂ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದಾಳೆ ಅಷ್ಟೇ ಅಂತಾ ಹೇಳಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...