ಲಕ್ನೋದ ದುಡಾ ಕಾಲೋನಿಯಲ್ಲಿ ಮುಸ್ಲಿಂ ವರ ಹಾಗೂ ಹಿಂದೂ ವಧು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದ ವೇಳೆ ಹೊಸ ಮತಾಂತರ ವಿರೋಧಿ ಕಾನೂನಿನ ಕಾರಣವೊಡ್ಡಿ ಪೊಲೀಸರು ಮದುವೆಗೆ ಅಡ್ಡಿಪಡಿಸಿದ್ದಾರೆ.
ಆದರೆ ವಧುವಿನ ತಾಯಿ ಹುಡುಗ – ಹುಡುಗಿ ಇಬ್ಬರೂ 5 ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸಿದ್ದಾರೆ. ಹೀಗಾಗಿ ಈ ಮದುವೆಯನ್ನ ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹೊಸ ಕಾನೂನು ಜಾರಿಯಾಗುವ ಮೊದಲೇ ಈ ಮದುವೆಯನ್ನ ನಿಶ್ಚಯಿಸಲಾಗಿತ್ತು. ಈ ವಿವಾಹಕ್ಕೆ ಅನುಮತಿ ಅಗತ್ಯವೆಂದು ಮೊದಲೇ ತಿಳಿದಿದ್ದರೆ ನಾವು ಆ ಕೆಲಸವನ್ನೂ ಮಾಡ್ತಿದ್ವಿ ಅಂತಾ ಎರಡೂ ಕುಟುಂಬದವರು ಹೇಳಿದ್ದಾರೆ.
ಫಾರ್ಮಾದಲ್ಲಿ ಔಷಧಿಗಾರನಾಗಿ ಕೆಲಸ ಮಾಡುವ ವರ ಈ ವಿಚಾರವಾಗಿ ಮಾತನಾಡಿ, ನಾವು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದೇವೆ. ನಮ್ಮ ನಡುವೆ ಮತಾಂತರದ ವಿಚಾರವೇ ಬಂದಿಲ್ಲ. ನಾವು ಎರಡೂ ಧರ್ಮವನ್ನ ಗೌರವಿಸುತ್ತೇವೆ ಎಂದು ಹೇಳಿದ್ದಾರೆ.
ವಧುವಿನ ತಾಯಿ ಕೂಡ ಈ ವಿಚಾರವಾಗಿ ಮಾತನಾಡುತ್ತಾ, ನಾವು ಬಹಳ ವರ್ಷಗಳಿಂದ ಮುಸ್ಲಿಂ ನೆರೆಹೊರೆಯವರ ಜೊತೆಯೇ ವಾಸ ಮಾಡುತ್ತಿದ್ದೇವೆ. ಹಾಗಾಗಿ ನಮಗೆ ಮುಸ್ಲಿಂ ಧರ್ಮದಿಂದ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ನನ್ನ ಮಗಳು ಮತಾಂತರವಾಗಿಲ್ಲ. ಮುಸ್ಲಿಂ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದಾಳೆ ಅಷ್ಟೇ ಅಂತಾ ಹೇಳಿಕೆ ನೀಡಿದ್ದಾರೆ.