
ಅಮೀರ್ ಖಾನ್ ಎಂಬ ಹೆಸರಿನ ಎನ್ಹೆಚ್ಎಸ್ ಆಸ್ಪತ್ರೆ ವೈದ್ಯ ತಮ್ಮ ತಾಯಿ ಕಳುಹಿಸಿದ ಮೆಸೇಜ್ನ ಸ್ಕ್ರೀನ್ಶಾಟ್ ಶೇರ್ ಮಾಡುವ ಮೂಲಕ ತಾಯಿಯ ಕಾಳಜಿ ಏನೆಂದು ತೋರಿಸಿದ್ದಾರೆ.
ಡಾ.ಅಮೀರ್ ಖಾನ್ ಶೇರ್ ಮಾಡಿರುವ ಮೆಸೇಜ್ನಲ್ಲಿ , ಅಮೀರ್ ನಿಮ್ಮ ತಾಯಿ ಹೇಳುತ್ತಿದ್ದಾರೆ. ನೀವು ಹೊರಗಡೆ ಹೋಗಬೇಕಾದ ಸಂದರ್ಭದ ಬಂದಾಗ ಕೋಟ್ ಧರಿಸಬೇಕಂತೆ. ಯಾಕೆಂದರೆ ಹೊರಗಡೆ ಮಂಜು ಇದೆ ಎಂದು ಬರೆಯಲಾಗಿದೆ.
ಈ ಫೋಟೋ ಶೇರ್ ಮಾಡಿರುವ ವೈದ್ಯ, ನನ್ನ ತಾಯಿ ನನಗೆ ಹಲವು ಬಾರಿ ಕರೆ ಮಾಡಿದ್ದರು. ಆದರೆ ನಾನು ಸರ್ಜರಿಯಲ್ಲಿ ಬ್ಯುಸಿ ಇದ್ದಿದ್ದರಿಂದ ಕಾಲ್ ರಿಸೀವ್ ಮಾಡೋಕೆ ಆಗಲಿಲ್ಲ. ಇದಾದ ಬಳಿಕ ರಿಸೆಪ್ಶನಿಸ್ಟ್ ಕಡೆಯಿಂದ ನನಗೆ ಈ ಮೆಸೇಜ್ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಟ್ವಿಟರ್ನಲ್ಲಿ ಸಖತ್ ವೈರಲ್ ಆಗಿದೆ. ಅನೇಕರು ಈ ಮೆಸೇಜ್ನ್ನು ಕೊಂಡಾಡಿದ್ರೆ ಇನ್ನು ಕೆಲವರು ತಮ್ಮ ತಾಯಿ ತೋರಿದ ಕಾಳಜಿಯ ಕೆಲ ಘಟನೆಗಳನ್ನ ಮೆಲಕು ಹಾಕಿದ್ದಾರೆ.

