
ಏಪ್ರಿಲ್ 19ನೇ ತಾರೀಖಿನಂದು ವರ ಕೊರೊನಾ ಸೋಂಕಿಗೆ ಒಳಗಾಗಿದ್ದರು. ನಾವು ಈ ಮದುವೆಯನ್ನ ನಿಲ್ಲಿಸಲು ನಿರ್ಧರಿಸಿದ್ದೆವು. ಆದರೆ ಮಾರ್ಗಸೂಚಿಗಳನ್ನ ಆಧರಿಸಿ ವಧು – ವರರಿಗೆ ಪಿಪಿಇ ಕಿಟ್ ಹಾಕಲಾಯಿತು ಎಂದು ಜಿಲ್ಲಾಡಳಿತದ ಅಧಿಕಾರಿ ನವೀನ್ ಗರ್ಗ್ ಹೇಳಿದ್ರು.
ದೇಶದಲ್ಲಿ ಕೊರೊನಾ ಕೇಸ್ ಅಧಿಕವಾಗುತ್ತಿದ್ದಂತೆಯೇ ಮಧ್ಯ ಪ್ರದೇಶದಲ್ಲಿ ಮದುವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಕಠಿಣ ಮಾರ್ಗಸೂಚಿಗಳನ್ನ ವಿಧಿಸಲಾಗಿದೆ. ಮದುವೆಗೆ ಕೇವಲ 50 ಮಂದಿ ಅತಿಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.