ಕೊರೊನಾ ಕಾಲದಿಂದಾಗಿ ಮದುವೆ ಕಾರ್ಯಕ್ರಮಗಳ ರೂಪವೇ ಬದಲಾಗಿ ಹೋಗಿದೆ. ಸಾವಿರಾರು ಮಂದಿ ಸೇರುತ್ತಿದ್ದ ಕಾರ್ಯಕ್ರಮದಲ್ಲಿ ಈಗೀಗ ಕೇವಲ ಬೆರಳಣಿಕೆಯಷ್ಟು ಜನ ಮಾತ್ರ ಕಾಣುವಂತಾಗಿದೆ. ಕೋವಿಡ್ ಸಂಕಷ್ಟದಲ್ಲಿ ಮನುಷ್ಯರ ಮದುವೆ ಮಾಡೋದೇ ಕಷ್ಟವಾಗಿರೋವಾಗ ಇಲ್ಲೊಂದು ಕಡೆ ಕಪ್ಪೆಗಳಿಗೆ ಮದುವೆ ಮಾಡಲಾಗಿದೆ.
ಎಲ್ಲರೂ ಕೋವಿಡ್ ಬಗ್ಗೆ ತಲೆಕೆಡಿಸಿಕೊಂಡಿರುವ ಈ ಸಂದರ್ಭದಲ್ಲಿ ತ್ರಿಪುರಾದ ಜನತೆ ಮಾನ್ಸೂನ್ ಮಳೆ ಬರಲಿ ಎಂದು ಪ್ರಾರ್ಥಿಸುತ್ತಾ ಎರಡು ಕಪ್ಪೆಗಳಿಗೆ ಮದುವೆ ಮಾಡಿದ್ದಾರೆ.
ಇಲ್ಲಿನ ಸ್ಥಳೀಯರು ಕಪ್ಪೆಗಳಿಗೆ ಮದುವೆ ಮಾಡಿದ್ರೆ ವರುಣ ದೇವ ತೃಪ್ತನಾಗುತ್ತಾನೆ ಎಂಬ ನಂಬಿಕೆ ಹೊಂದಿದ್ದಾರೆ. ಹೀಗಾಗಿ ಒಳ್ಳೆಯ ಮಳೆಗಾಲ ಬರಲಿ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ.
ರಾಜ್ಯದಲ್ಲಿ ಇವತ್ತೂ ಕೊರೋನಾ ಅಬ್ಬರ, 5.17 ಲಕ್ಷ ಸಕ್ರಿಯ ಪ್ರಕರಣ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಪ್ಪೆಗಳಿಗೆ ಹಾರ ಹಾಕಿ, ಸಿಂಧೂರವನ್ನ ಹಚ್ಚಿ ಶಾಸ್ತ್ರೋಸ್ತ್ರವಾಗಿ ಮದುವೆ ಮಾಡಲಾಗಿದೆ.
ಈ ರೀತಿಯ ಆಚರಣೆಗಳು ನೋಡೋಕೆ ವಿಚಿತ್ರ ಎನಿಸಬಹುದು. ಆದರೆ ಈ ರೀತಿ ಕಪ್ಪೆಗಳನ್ನ ಮದುವೆ ಮಾಡುವ ಪದ್ಧತಿ ಬಹಳ ಹಳೆಯ ಕಾಲದಿಂದಲೂ ನಡೆದುಕೊಂಡು ಬರ್ತಿದೆ. ಮದುವೆ ಮಾತ್ರವಲ್ಲ……ಕೆಲವೊಮ್ಮೆ ಅತಿಯಾಗಿ ಮಳೆ ಬಂದರೆ ಕಪ್ಪೆಗಳಿಗೆ ವಿಚ್ಚೇದನ ನೀಡುವ ಪದ್ಧತಿಯೂ ನಮ್ಮಲ್ಲಿದೆ.