ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಕೋತಿಯೊಂದು ಆಹಾರದ ಸ್ಯಾಂಪಲ್ಗಳನ್ನ ಸವಿಯುತ್ತಾ ಎಂಜಾಯ್ ಮಾಡಿದೆ. 2018ರ ಮಾರ್ಚ್ನಲ್ಲಿ ಚಿತ್ರೀಕರಿಸಿದ ವಿಡಿಯೋ ಇದಾಗಿದ್ದು, ಇದೀಗ ಮತ್ತೊಮ್ಮೆ ವೈರಲ್ ಆಗಿದೆ. ವಿಡಿಯೋದಲ್ಲಿ ಕೋತಿಯು ಏರ್ ಇಂಡಿಯಾ ಲಾಂಜ್ ಒಳಗೆ ಕೌಂಟರ್ನಲ್ಲಿ ಕೂತು ರುಚಿಕರ ಖಾದ್ಯವನ್ನ ಸವಿಯುತ್ತಿರೋದನ್ನ ನೀವು ಕಾಣಬಹುದಾಗಿದೆ.
ಲಾಂಜ್ನಲ್ಲಿ ತನ್ನ ವಿಮಾನ ಬರೋದಕ್ಕೆ ಕಾಯುತ್ತಿದ್ದ ಪ್ರಯಾಣಿಕರಾದ ಜೆನ್ನಾ ಕರ್ಟೀಸ್ ಎಂಬವರು ಈ ವಿಡಿಯೋವನ್ನ ಸೆರೆ ಹಿಡಿದಿದ್ದಾರೆ. 2018ರ ಮಾರ್ಚ್ 5ರಂದು ಜೆನ್ನಾ ಉದ್ಯಮ ಪ್ರವಾಸದ ಹಿನ್ನೆಲೆ ಭಾರತಕ್ಕೆ ಆಗಮಿಸಿದ್ದರು. ಇದೀಗ ಈ ವಿಡಿಯೋ ಮತ್ತೊಮ್ಮೆ ವೈರಲ್ ಆಗಿದೆ.
ಜೆನ್ನಾ ಫುಡ್ ಕೌಂಟರ್ ಬಳಿ ಇದ್ದ ರೆಫ್ರಿಜರೇಟರ್ನಿಂದ ನೀರಿನ ಬಾಟಲಿಯನ್ನ ತೆಗೆದುಕೊಂಡು ಹೋಗಲು ಆಗಮಿಸಿದ್ದರು. ನೀರಿನ ಬಾಟಲಿ ತೆಗೆದುಕೊಂಡು ಅಲ್ಲಿಂದ ಹಿಂತಿರುಗುತ್ತಿದ್ದ ವೇಳೆ ಈ ಕೋತಿ ಆಹಾರ ತಿನ್ನುತ್ತಿರುವ ದೃಶ್ಯ ಜೆನ್ನಾ ಕಣ್ಣಿಗೆ ಬಿದ್ದಿದೆ. ಎಲ್ಲಾ ಆಹಾರವನ್ನ ಸವಿದ ಕೋತಿಗೂ ಕೊನೆಗೆ ಅಲ್ಲಿದ್ದ ಬಾಳೆಹಣ್ಣನ್ನೂ ಸವಿದಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.