alex Certify ಏಕಾಏಕಿ ಹಿಮ್ಮುಖವಾಗಿ ಚಲಿಸಿದ​ ರೈಲು..! ಬೆಚ್ಚಿಬೀಳಿಸುವಂತಿದೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಾಏಕಿ ಹಿಮ್ಮುಖವಾಗಿ ಚಲಿಸಿದ​ ರೈಲು..! ಬೆಚ್ಚಿಬೀಳಿಸುವಂತಿದೆ ವಿಡಿಯೋ

ದೆಹಲಿಯಿಂದ ಉತ್ತರಾಖಂಡ್​​ಗೆ ಹೊರಟಿದ್ದ ರೈಲೊಂದು ಬರೋಬ್ಬರಿ 35 ಕಿಲೋಮೀಟರ್​​ವರೆಗೆ ಉಲ್ಟಾ ದಿಕ್ಕಿನಲ್ಲಿ ಪ್ರಯಾಣಿಸಿದ ವಿಚಿತ್ರ ಘಟನೆ ನಡೆದಿದೆ.

ರೈಲಿನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ಹಿಮ್ಮುಖವಾಗಿ ಚಲಿಸಿದ್ದು ಖತಿಮಾದಲ್ಲಿ ನಿಲ್ಲಿಸಲಾಗಿದೆ.

ಪೂರ್ಣಗಿರಿ ಜನಶತಾಬ್ದಿ ಎಕ್ಸ್​ಪ್ರೆಸ್​​ ದೆಹಲಿಯಿಂದ ಉತ್ತರಾಖಂಡ್​​ನ ತಾನಕ್​ಪುರಕ್ಕೆ ಹೊರಟಿತ್ತು. ರೈಲ್ವೆ ಹಳಿಯ ಮೇಲೆ ಪ್ರಾಣಿ ನಿಂತಿದ್ದನ್ನ ಕಂಡ ರೈಲು ಚಾಲಕ ಅದನ್ನ ಪ್ರಾಣಾಪಾಯದಿಂದ ಕಾಪಾಡಬೇಕು ಅಂತಾ ಬ್ರೇಕ್​ನ್ನ ಒತ್ತಿದ್ದಾರೆ. ಆದರೆ ಈ ವೇಳೆ ಲೋಕೋಮೋಟಿವ್​ ತನ್ನ ನಿಯಂತ್ರಣ ಕಳೆದುಕೊಂಡ ಹಿನ್ನೆಲೆ ರೈಲು ಹಿಮ್ಮುಖವಾಗಿ ಚಲಿಸಿದೆ.

ಕಡಿಮೆ ಅಂದ್ರುನೂ ಈ ರೈಲು 35 ಕಿಲೋಮೀಟರ್​ವರೆಗೆ ಚಲಿಸಿದೆ. ರೈಲು ನಿಲ್ಲುತ್ತಿದ್ದಂತೆಯೇ ಪ್ರಯಾಣಿಕರನ್ನ ಬಸ್​ ಮೂಲಕ ತಾನಕ್​ಪುರಕ್ಕೆ ತಲುಪಿಸಲಾಗಿದೆ. ಇನ್ನು ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಘಟನೆಯ ಬಗ್ಗೆ ತನಿಖೆ ಬಾಕಿ ಇರುವ ಹಿನ್ನೆಲೆ ಲೋಕೋ ಪೈಲಟ್​ ಹಾಗೂ ಸಿಬ್ಬಂದಿಯನ್ನ ಅಮಾನತುಗೊಳಿಸಲಾಗಿದೆ.

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...