ದೆಹಲಿಯಿಂದ ಉತ್ತರಾಖಂಡ್ಗೆ ಹೊರಟಿದ್ದ ರೈಲೊಂದು ಬರೋಬ್ಬರಿ 35 ಕಿಲೋಮೀಟರ್ವರೆಗೆ ಉಲ್ಟಾ ದಿಕ್ಕಿನಲ್ಲಿ ಪ್ರಯಾಣಿಸಿದ ವಿಚಿತ್ರ ಘಟನೆ ನಡೆದಿದೆ.
ರೈಲಿನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ಹಿಮ್ಮುಖವಾಗಿ ಚಲಿಸಿದ್ದು ಖತಿಮಾದಲ್ಲಿ ನಿಲ್ಲಿಸಲಾಗಿದೆ.
ಪೂರ್ಣಗಿರಿ ಜನಶತಾಬ್ದಿ ಎಕ್ಸ್ಪ್ರೆಸ್ ದೆಹಲಿಯಿಂದ ಉತ್ತರಾಖಂಡ್ನ ತಾನಕ್ಪುರಕ್ಕೆ ಹೊರಟಿತ್ತು. ರೈಲ್ವೆ ಹಳಿಯ ಮೇಲೆ ಪ್ರಾಣಿ ನಿಂತಿದ್ದನ್ನ ಕಂಡ ರೈಲು ಚಾಲಕ ಅದನ್ನ ಪ್ರಾಣಾಪಾಯದಿಂದ ಕಾಪಾಡಬೇಕು ಅಂತಾ ಬ್ರೇಕ್ನ್ನ ಒತ್ತಿದ್ದಾರೆ. ಆದರೆ ಈ ವೇಳೆ ಲೋಕೋಮೋಟಿವ್ ತನ್ನ ನಿಯಂತ್ರಣ ಕಳೆದುಕೊಂಡ ಹಿನ್ನೆಲೆ ರೈಲು ಹಿಮ್ಮುಖವಾಗಿ ಚಲಿಸಿದೆ.
ಕಡಿಮೆ ಅಂದ್ರುನೂ ಈ ರೈಲು 35 ಕಿಲೋಮೀಟರ್ವರೆಗೆ ಚಲಿಸಿದೆ. ರೈಲು ನಿಲ್ಲುತ್ತಿದ್ದಂತೆಯೇ ಪ್ರಯಾಣಿಕರನ್ನ ಬಸ್ ಮೂಲಕ ತಾನಕ್ಪುರಕ್ಕೆ ತಲುಪಿಸಲಾಗಿದೆ. ಇನ್ನು ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಘಟನೆಯ ಬಗ್ಗೆ ತನಿಖೆ ಬಾಕಿ ಇರುವ ಹಿನ್ನೆಲೆ ಲೋಕೋ ಪೈಲಟ್ ಹಾಗೂ ಸಿಬ್ಬಂದಿಯನ್ನ ಅಮಾನತುಗೊಳಿಸಲಾಗಿದೆ.