alex Certify ‘ಜಲ್ಲಿಕಟ್ಟು’ ವೇಳೆ ಅವಘಡ: ಗೂಳಿ ಗುದ್ದಿದ ರಭಸಕ್ಕೆ ಹಾರಿಬಿದ್ದ ಪೇದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಜಲ್ಲಿಕಟ್ಟು’ ವೇಳೆ ಅವಘಡ: ಗೂಳಿ ಗುದ್ದಿದ ರಭಸಕ್ಕೆ ಹಾರಿಬಿದ್ದ ಪೇದೆ

Watch: Speeding bull throws cop in air at Jallikattu event in Vellore -  India Newsತಮಿಳುನಾಡಿನ ವೆಲ್ಲೂರಿನಲ್ಲಿ ನಡೆದ ಜಲ್ಲಿಕಟ್ಟು ಕಾರ್ಯಕ್ರಮವೊಂದರಲ್ಲಿ ವೇಗವಾಗಿ ಬಂದ ಗೂಳಿಯೊಂದು ಪೊಲೀಸ್​ಗೆ ಗುದ್ದಿದ ಘಟನೆ ವರದಿಯಾಗಿದೆ. ವೆಲ್ಲೂರು ಜಲ್ಲಿಕಟ್ಟು ಪಂದ್ಯದ ವೇಳೆ ವೇಗವಾಗಿ ಬಂದ ಗೂಳಿ ಪೊಲೀಸ್​ ಕಾನ್​​ಸ್ಟೇಬಲ್​ನ್ನು ಎತ್ತೆಸೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಭಯಾನಕ ವಿಡಿಯೋ ವೈರಲ್​ ಆಗಿದೆ.

ವೆಲ್ಲೂರಿನ ಅರಸಪಟ್ಟಿಯಲ್ಲಿ ಯೆರೆತು ವಿದಮ್​ ವಿಝಾ ಎಂಬ ಜಲ್ಲಿಕಟ್ಟು ಕಾರ್ಯಕ್ರಮದಲ್ಲಿ ಕಾನ್​ಸ್ಟೇಬಲ್​ ಸರೇಶ್​​ ಎಂಬವರು ಗಾಯಗೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ 5000ಕ್ಕೂ ಹೆಚ್ಚು ಜನರು ನೆರೆದಿದ್ದರು ಎನ್ನಲಾಗಿದೆ.

ಪೇದೆ ಸರೇಶ್​, ಜನಸಮೂಹವನ್ನ ನಿಯಂತ್ರಿಸುವಲ್ಲಿ ನಿರತರಾಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬಂದ ಗೂಳಿಯೊಂದು ಸರೇಶ್​​ಗೆ ಬಂದು ಗುದ್ದಿದೆ. ಈ ರಭಸಕ್ಕೆ ಒಮ್ಮೆಲೆ ಗಾಳಿಯಲ್ಲಿ ತೇಲಿದ ಸರೇಶ್​ ಮಕಾಡೆಯಲ್ಲಿ ನೆಲಕ್ಕೆ ಬಿದ್ದಿದ್ದಾರೆ. ಪೇದೆ ಸರೇಶ್​ರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...