alex Certify ಶಾಕ್‌ ಆಗುವಂತಿದೆ ʼಮಾಸ್ಕ್ʼ‌ ತಾನೇಕೆ ಧರಿಸಿಲ್ಲವೆಂಬುದಕ್ಕೆ ಈತ ನೀಡಿದ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕ್‌ ಆಗುವಂತಿದೆ ʼಮಾಸ್ಕ್ʼ‌ ತಾನೇಕೆ ಧರಿಸಿಲ್ಲವೆಂಬುದಕ್ಕೆ ಈತ ನೀಡಿದ ಕಾರಣ

ಮಾಸ್ಕ್​ ಬಳಕೆ ಹಾಗೂ ಸಾಮಾಜಿಕ ಅಂತರವನ್ನ ಕಾಪಾಡಿಕೊಳ್ಳೋದ್ರಿಂದ ಕೊರೊನಾ ವೈರಸ್​ನಿಂದ ದೂರ ಇರಬಹುದು ಅನ್ನೋದನ್ನ ಈಗಾಗಲೇ ಸಾಕಷ್ಟು ಅಧ್ಯಯನಗಳು ಸಾಬೀತುಪಡಿಸಿವೆ.

ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಚುನಾವಣಾ ರ್ಯಾಲಿಯಲ್ಲಿ ತಾನೇಕೆ ಮಾಸ್ಕ್​ ಹಾಕಿಕೊಂಡಿಲ್ಲ ಅನ್ನೋದಕ್ಕೆ ವಿಚಿತ್ರ ಕಾರಣ ನೀಡಿದ್ದು ಇದನ್ನ ಕೇಳಿದ ನೆಟ್ಟಿಗರು ಶಾಕ್​ ಆಗಿದ್ದಾರೆ.

ಟ್ವಿಟರ್​​ನಲ್ಲಿ ಶೇರ್​ ಮಾಡಲಾದ ಈ ವಿಡಿಯೋದಲ್ಲಿರುವ ವ್ಯಕ್ತಿ ಸೂರ್ಯನ ಕೆಳಗೆ ಕೂತರೆ ಸಾಕು ಕೊರೊನಾ ವೈರಸ್​ ನಿಮ್ಮ ಹತ್ತಿರಕ್ಕೂ ಸುಳಿಯೋದಿಲ್ಲ ಅಂತಾ ಹೇಳಿದ್ದಾನೆ. ನಾನು ಸೂರ್ಯನ ಕೆಳಗೆ ಇದ್ದರೆ ಸಾಕು ಕೊರೊನಾ ಓಡಿ ಹೋಗುತ್ತೆ ಎಂದು ಈ ಕ್ಲಿಪ್​​ನಲ್ಲಿ ಹೇಳ್ತಿರೋದನ್ನ ನೀವು ಕೇಳಬಹುದಾಗಿದೆ. ಇದು ಮಾತ್ರವಲ್ಲದೇ ಸೂರ್ಯನ ಶಾಖದಿಂದ ದೇಹವು ಬೆವರಿದ್ರೆ ಹೇಗೆ ಕಾಯಿಲೆಗಳು ದೂರಾಗುತ್ತವೆ ಅನ್ನೋದಕ್ಕೂ ಕಾರಣ ನೀಡಿದ್ದಾನೆ.

ಈ ನಿರ್ಧಾರಕ್ಕೆ ನೀವು ಹೇಗೆ ಬಂದಿರಿ ಎಂತಾ ಕೇಳಿದ್ರೆ ತನ್ನದೇ ಆದ ವಿವರಣೆಯನ್ನ ಹೇಳುವ ಈ ವ್ಯಕ್ತಿ ಮಾಸ್ಕ್​ ಧರಿಸೋಕೆ ನಿರಾಕರಿಸಿದ್ದಾನೆ .ಈ ವಿಡಿಯೋ ಟ್ವಿಟರ್​ನಲ್ಲಿ ಗಲ್ಲಾಪೆಟ್ಟಿಗೆ ಸದ್ದು ಮಾಡ್ತಿದೆ.

— CLowN (@Fake_memedia) April 13, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...