
ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಚುನಾವಣಾ ರ್ಯಾಲಿಯಲ್ಲಿ ತಾನೇಕೆ ಮಾಸ್ಕ್ ಹಾಕಿಕೊಂಡಿಲ್ಲ ಅನ್ನೋದಕ್ಕೆ ವಿಚಿತ್ರ ಕಾರಣ ನೀಡಿದ್ದು ಇದನ್ನ ಕೇಳಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ಟ್ವಿಟರ್ನಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿರುವ ವ್ಯಕ್ತಿ ಸೂರ್ಯನ ಕೆಳಗೆ ಕೂತರೆ ಸಾಕು ಕೊರೊನಾ ವೈರಸ್ ನಿಮ್ಮ ಹತ್ತಿರಕ್ಕೂ ಸುಳಿಯೋದಿಲ್ಲ ಅಂತಾ ಹೇಳಿದ್ದಾನೆ. ನಾನು ಸೂರ್ಯನ ಕೆಳಗೆ ಇದ್ದರೆ ಸಾಕು ಕೊರೊನಾ ಓಡಿ ಹೋಗುತ್ತೆ ಎಂದು ಈ ಕ್ಲಿಪ್ನಲ್ಲಿ ಹೇಳ್ತಿರೋದನ್ನ ನೀವು ಕೇಳಬಹುದಾಗಿದೆ. ಇದು ಮಾತ್ರವಲ್ಲದೇ ಸೂರ್ಯನ ಶಾಖದಿಂದ ದೇಹವು ಬೆವರಿದ್ರೆ ಹೇಗೆ ಕಾಯಿಲೆಗಳು ದೂರಾಗುತ್ತವೆ ಅನ್ನೋದಕ್ಕೂ ಕಾರಣ ನೀಡಿದ್ದಾನೆ.
ಈ ನಿರ್ಧಾರಕ್ಕೆ ನೀವು ಹೇಗೆ ಬಂದಿರಿ ಎಂತಾ ಕೇಳಿದ್ರೆ ತನ್ನದೇ ಆದ ವಿವರಣೆಯನ್ನ ಹೇಳುವ ಈ ವ್ಯಕ್ತಿ ಮಾಸ್ಕ್ ಧರಿಸೋಕೆ ನಿರಾಕರಿಸಿದ್ದಾನೆ .ಈ ವಿಡಿಯೋ ಟ್ವಿಟರ್ನಲ್ಲಿ ಗಲ್ಲಾಪೆಟ್ಟಿಗೆ ಸದ್ದು ಮಾಡ್ತಿದೆ.