alex Certify ಹಳಿಗಳ ಮೇಲಿದ್ದ ಜಾನುವಾರುಗಳನ್ನ ಕಂಡು ರೈಲನ್ನೇ ನಿಲ್ಲಿಸಿ ಮಾನವೀಯತೆ ಮೆರೆದ ಚಾಲಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳಿಗಳ ಮೇಲಿದ್ದ ಜಾನುವಾರುಗಳನ್ನ ಕಂಡು ರೈಲನ್ನೇ ನಿಲ್ಲಿಸಿ ಮಾನವೀಯತೆ ಮೆರೆದ ಚಾಲಕ..!

ಹಳಿಗಳ ಮೇಲೆ ದನಗಳು ನಿಂತಿದ್ದನ್ನ ಕಂಡ ಕೊಯಂಬತ್ತೂರು – ಹಿಸಾರ್​ ಎಕ್ಸ್​ಪ್ರೆಸ್​ ರೈಲು ಚಾಲಕ ತಕ್ಷಣವೇ ಬ್ರೇಕ್​​ ಹಾಕುವ ಮೂಲಕ ಹಸುಗಳನ್ನ ಪ್ರಾಣಾಪಾಯದಿಂದ ಕಾಪಾಡಿದ್ದಾರೆ. ಪಾಲಕ್ಕಡ್​ ನಿಲ್ದಾಣದಿಂದ ಹೊರಟಿದ್ದ ರೈಲು ಇದಾಗಿತ್ತು.

ಪತ್ರಕರ್ತರೊಬ್ಬರು ಚಿತ್ರೀಕರಿಸಿದ ವಿಡಿಯೋದಲ್ಲಿ ಹಳಿಗಳ ಮೇಲೆ ನಿಂತಿದ್ದ ಜಾನುವಾರುಗಳು ಅಲ್ಲಿಂದ ಹಾದು ಹೋಗುವವರೆಗೂ ಚಾಲಕ ರೈಲನ್ನ ನಿಲ್ಲಿಸಿಕೊಂಡಿದ್ದರು. ರೈಲು ಚಾಲಕ ಮೊದಲು ಹಾರ್ನ್​ ಹಾಕುವ ಮೂಲಕ ಜಾನುವಾರುಗಳನ್ನ ಹಳಿಯಿಂದ ಕದಲಿಸಲು ಯತ್ನಿಸಿದ್ದರು. ಆದರೆ ಇದು ಸಾಧ್ಯವಾಗದೇ ಇದ್ದಾಗ ರೈಲನ್ನೇ ನಿಲ್ಲಿಸಿ ಕೆಳಗಿಳಿದು ಬಂದು ಹಸುಗಳನ್ನ ಹಳಿಯಿಂದ ಓಡಿಸಿ ಬಳಿಕ ರೈಲನ್ನ ಚಲಾಯಿಸಿದ್ದಾರೆ.

ಪತ್ರಕರ್ತ ರಾಜೇಶ್​ ಎಂಬವರು ಈ ಸಂಪೂರ್ಣ ದೃಶ್ಯವನ್ನ ಸೆರೆ ಹಿಡಿದಿದ್ದಾರೆ. ನಾನು ಕೂಡ ಹಳಿಯನ್ನ ದಾಟುವವನಿದ್ದೆ. ಈ ವೇಳೆ ನನಗೆ ಈ ಅಮೂಲ್ಯವಾದ ದೃಶ್ಯವನ್ನ ನೋಡಲು ಸಾಧ್ಯವಾಯ್ತು ಎಂದು ಹೇಳಿದ್ದಾರೆ.

ಇನ್ನು ಈ ವಿಚಾರವಾಗಿ ಭಾರತೀಯ ರೈಲ್ವೆ ಇಲಾಖೆ ಅಧಿಕಾರಿಗಳು ಕೂಡ ಪ್ರತಿಕ್ರಿಯೆ ನೀಡಿದ್ದು , ರೈಲು ಕಡಿಮೆ ವೇಗದಲ್ಲಿ ಚಲಿಸ್ತಾ ಇದ್ದಿದ್ದರಿಂದ ಚಾಲಕನಿಗೆ ಬ್ರೇಕ್​ ಹಾಕೋಕೆ ಸಾಧ್ಯವಾಯ್ತು. ನಮ್ಮ ಇಲಾಖೆ ಸಿಬ್ಬಂದಿಯ ಕರುಣೆಯನ್ನ ಕಂಡು ಖುಷಿಯಾಗಿದೆ. ಆದರೆ ರೈಲುಗಳು ಅತಿಯಾದ ವೇಗದಲ್ಲಿ ಇದ್ದಾಗ ಇಂತಹ ಅವಘಡಗಳನ್ನ ತಪ್ಪಿಸೋಕೆ ಚಾಲಕರ ಕೈಯಿಂದಲೂ ಸಾಧ್ಯವಾಗೋದಿಲ್ಲ ಎಂದು ಹೇಳಿದ್ರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...