alex Certify ಜಾಗತಿಕ ಪ್ರಶಸ್ತಿ ಮುಡಿಗೇರಿಸಿಕೊಂಡ ಶಿಕ್ಷಕನ ಸಂತಸದ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಗತಿಕ ಪ್ರಶಸ್ತಿ ಮುಡಿಗೇರಿಸಿಕೊಂಡ ಶಿಕ್ಷಕನ ಸಂತಸದ ವಿಡಿಯೋ ವೈರಲ್​

ಶಿಕ್ಷಣ ಲೋಕದಲ್ಲಿ ತನ್ನದೇ ಆದ ಬೋಧನಾ ಕ್ರಮವನ್ನ ಅಳವಡಿಸಿಕೊಂಡಿದ್ದ ಭಾರತೀಯ ಶಿಕ್ಷಕ ರಂಜಿತ್​ ಸಿಂಹ್​​ ಜಾಗತಿಕ ಶಿಕ್ಷಕ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ.

ಬಹುಮಾನ ರೂಪದಲ್ಲಿ ಬಂದ 7.4 ಕೋಟಿ ರೂಪಾಯಿಗಳಲ್ಲಿ ತನ್ನ ಒಂಬತ್ತು ಸಹವರ್ತಿಗಳ ಜೊತೆ ಹಂಚಿಕೊಳ್ಳುವ ಮೂಲಕ ಮಹಾರಾಷ್ಟ್ರದ ಈ ಶಿಕ್ಷಕ ವಿಶ್ವಕ್ಕೇ ಮಾದರಿ ಎನಿಸಿಕೊಂಡಿದ್ದಾರೆ.

ಸಮಾಜವನ್ನ ತಿದ್ದಿ ತೀಡುವ ಸಾಮರ್ಥ್ಯ ಇರೋದು ಕೇವಲ ಶಿಕ್ಷಕರ ಕೈಯಲ್ಲಿ ಮಾತ್ರ. ಶಿಕ್ಷಕರ ಪರಿಶ್ರಮದ ಬಗ್ಗೆ ಗೌರವವನ್ನ ಹೊಂದಿದ್ದ ಶಿಕ್ಷಕ ರಂಜಿತ್​ ತನ್ನ ಬಹುಮಾನ ಮೊತ್ತದ ಶೇಕಡಾ 50 ಪ್ರತಿಶತವನ್ನ 10 ಮಂದಿ ಫೈನಲಿಸ್ಟ್​​ಗೆ ಹಂಚುವ ಮೂಲಕ​ ಇದೀಗ ದೇಶದ ಮನೆಮಾತಾಗಿದ್ದಾರೆ.

ಹಿರಿಯ ನಟ ಹಾಗೂ ಬರಹಗಾರ ಸ್ಪೀಫನ್​ ಫ್ರೈ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವಿಜೇತರನ್ನ ಘೋಷಣೆ ಮಾಡಿದ್ದ ವೇಳೆ ರಂಜಿತ್​ ಖುಷಿ ಪಟ್ಟ ಬಗೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪೋಷಕರ ಮಧ್ಯೆ ಕುಳಿತಿದ್ದ ರಂಜಿತ್​​ ಸಂತೋಷದಿಂದ ಕೂಗಿದರು. ಕೂಡಲೇ ಶಿಕ್ಷಕರ ತಾಯಿ ಮಗನನ್ನ ಅಪ್ಪಿಕೊಂಡರು. ಬಳಿಕ ರಂಜಿತ್​ ತನ್ನ ತಂದೆಯನ್ನೂ ಬರಸೆಳೆದು ಅಪ್ಪಿಕೊಂಡಿದ್ದಾರೆ. ವಿಡಿಯೋದಲ್ಲಿ ಇನ್ನೊಂದು ತಾಯಿ ಹಾಗೂ ಮಗುವನ್ನೂ ನೋಡಬಹುದಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...