ಸಾಮಾನ್ಯ ಜನರಿಗೆ ಚಳ್ಳೆ ಹಣ್ಣು ತಿನ್ನಿಸೋದ್ರಲ್ಲಿ ಕಳ್ಳರು ಮುಂದಿರ್ತಾರೆ. ಎಲ್ಲ ಟೆಕ್ನಿಕ್ಸ್ ಕಳ್ಳರಿಗೆ ತಿಳಿದಿರುತ್ತದೆ. ಇದಕ್ಕೆ ಸಿಸಿ ಟಿವಿಯಲ್ಲಿ ವೈರಲ್ ಆದ ಈ ವಿಡಿಯೋ ಉತ್ತಮ ನಿದರ್ಶನ.
ಪಾರ್ಕ್ ಮಾಡಿದ್ದ ಕಾರ್ ನಲ್ಲಿದ್ದ ಬ್ಯಾಗನ್ನು ಕಳ್ಳ ಕದ್ದೊಯ್ದ ವಿಡಿಯೋ ವೈರಲ್ ಆಗಿದೆ.
ಸಿಸಿ ಟಿವಿಯಲ್ಲಿ ಕಾರ್ ಒಂದು ರಸ್ತೆ ಬದಿಯಲ್ಲಿ ಪಾರ್ಕ್ ಆಗುತ್ತದೆ. ಚಾಲಕ ಕಾರಿನಿಂದ ಇಳಿದು ಕಾರ್ ಲಾಕ್ ಮಾಡಲು ಮುಂದಾಗ್ತಾನೆ. ಇದಕ್ಕಿಂತ ಮೊದಲೇ ಕಪ್ಪು ಜಾಕೆಟ್ ಧರಿಸಿದ ವ್ಯಕ್ತಿಯೊಬ್ಬ ಹಿಂದಿನ ಬಾಗಿಲನ್ನು ಸ್ವಲ್ಪ ತೆಗೆದು ಹೋಗ್ತಾನೆ. ಚಾಲಕ ಪಾರ್ಕ್ ಮಾಡಿ ಹೋಗ್ತಿದ್ದಂತೆ ತೆರೆದ ಬಾಗಿಲಿನಿಂದ ಒಳಗೆ ಹೋಗುವ ಕಳ್ಳ ಬ್ಯಾಗ್ ಹಿಡಿದು ಇನ್ನೊಂದು ಬಾಗಿಲಿನಿಂದ ಹೊರಗೆ ಬರ್ತಾನೆ.
ಸಿಸಿ ಟಿವಿ ಈ ವಿಡಿಯೋ ವೈರಲ್ ಆಗಿದೆ. ಇದು ಎಲ್ಲಿಯ ವಿಡಿಯೋ ಎಂಬುದು ಗೊತ್ತಿಲ್ಲ. ಡಿಸೆಂಬರ್ ತಿಂಗಳ ಆರಂಭದಲ್ಲಿ ಈ ವಿಡಿಯೋ ವೈರಲ್ ಆಗಿತ್ತು. ಈಗ್ಲೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳಲಾಗ್ತಿದೆ. ಎಚ್ಚರಿಕೆಯಿಂದಿರುವಂತೆ ಜನರಿಗೆ ಹೇಳಲಾಗ್ತಿದೆ. ಇದ್ರ ಬಗ್ಗೆ ಸಾಕಷ್ಟು ಕಮೆಂಟ್ ಬರ್ತಿದೆ. ಈ ವಿಡಿಯೋ ನೋಡಿದ ನಂತ್ರವಾದ್ರೂ ಎಚ್ಚೆತ್ತುಕೊಳ್ಳಿ. ಕಾರ್ ಲಾಕ್ ಮಾಡುವ ಮೊದಲು ಎಲ್ಲ ಬಾಗಿಲನ್ನು ಹಾಕಿದ್ದೀರಾ ಎಂಬುದನ್ನು ಪರೀಕ್ಷಿಸಿಕೊಳ್ಳಿ.
https://youtu.be/AUAvzjqyOqM