alex Certify PUBG ಗೇಮ್ ನ್ನು ಹೀಗೂ ಆಡಬಹುದು ನೋಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

PUBG ಗೇಮ್ ನ್ನು ಹೀಗೂ ಆಡಬಹುದು ನೋಡಿ…!

ಜನಪ್ರಿಯ ಗೇಮ್ ಶೋಗಳಲ್ಲಿ ಒಂದಾಗಿದ್ದ ಪಬ್​ ಜಿಯನ್ನ ಭಾರತದಲ್ಲಿ ನಿಷೇಧಿಸಿ ಹಲವು ತಿಂಗಳುಗಳೇ ಕಳೆದಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ದೇಶದಲ್ಲಿದ್ದ ಅನೇಕ ಪಬ್​ ಜಿ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ. ಇಂದಲ್ಲ ನಾಳೆ ಈ ಗೇಮ್​ ಭಾರತದಲ್ಲಿ ರೀ ಲಾಂಚ್​ ಆಗುತ್ತೆ ಅಂತಾ ಅನೇಕರು ಕಾಯುತ್ತಿದ್ದಾರೆ.

ಇದೆಲ್ಲದರ ನಡುವೆ ಮೂವರು ಸೇರಿ ಪಬ್​ ಜಿ ಗೇಮ್ ಒಂದನ್ನ ಮರುಸೃಷ್ಟಿ ಮಾಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪಬ್​ ಜಿ ಆಟಗಾರರಂತೆ ಡ್ರೆಸ್​ ಮಾಡಿಕೊಂಡ ಮೂವರು ಆಟಿಕೆ ಬಂದೂಕು ಹಾಗೂ ಇತರೆ ಪರಿಕರಗಳನ್ನ ಬಳಕೆ ಮಾಡಿದ್ದಾರೆ. ಅಲ್ಲದೇ ಪಬ್​ ಜಿ ಮ್ಯೂಸಿಕ್​ನೊಂದಿಗೆ ವಿಡಿಯೋ ಮಾಡಲಾಗಿದ್ದು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಸ್ಮೈಲೋ ಎಂಬ ಫೇಸ್​ಬುಕ್​ ಖಾತೆಯಲ್ಲಿ ವಿಡಿಯೋ ಶೇರ್ ಮಾಡಲಾಗಿದೆ. ಈ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 16 ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.

pubg in real life ??

pubg in real life ??

Posted by Smilo on Thursday, December 24, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...