alex Certify ಹೋರಿ ಜನ್ಮದಿನ ಆಚರಿಸೋಕೆ ಹೋಗಿ ಜೈಲು ಸೇರಿದ ಭೂಪ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋರಿ ಜನ್ಮದಿನ ಆಚರಿಸೋಕೆ ಹೋಗಿ ಜೈಲು ಸೇರಿದ ಭೂಪ….!

ಕೊರೊನಾ ವೈರಸ್​​ ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಹೋರಿಯ ಜನ್ಮದಿನವನ್ನ ಸ್ನೇಹಿತರ ಜೊತೆ ಸೇರಿ ಆಚರಿಸಿದ ಥಾಣೆಯ ದೊಂಬಿವಿಲಿಯ 30 ವರ್ಷದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಾಸ್ಕ್​ ಧರಿಸದೇ ಹಾಗೂ ಸಾಮಾಜಿಕ ಅಂತರವನ್ನ ಕಾಪಾಡದೇ ಸ್ನೇಹಿತರೊಂದಿಗೆ ಹೋರಿಯ ಜನ್ಮದಿನವನ್ನ ಆಚರಿಸುತ್ತಿದ್ದ ಆರೋಪಿ ಕಿರಣ್​ ಮಾತ್ರೆ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ದೊಂಬಿವಿಲಿ ಜಿಲ್ಲೆಯ ರೆಟಿ ಬಂಡರ್​​ನಲ್ಲಿದ್ದ ಕಿರಣ್​ ಎಂಬವರ ನಿವಾಸದ ಬಳಿ ಈ ಪಾರ್ಟಿಯನ್ನ ಆಯೋಜಿಸಲಾಗಿತ್ತು. ಇನ್ನು ಈ ವಿಚಾರವಾಗಿ ಮಾಹಿತಿ ನೀಡಿದ ವಿಷ್ಣು ನಗರ ಪೊಲೀಸ್​ ಠಾಣೆಯ ಅಧಿಕಾರಿಯೊಬ್ಬರು, ಕಾರ್ಯಕ್ರಮಕ್ಕೆ ಹಾಜರಾದ ಹೆಚ್ಚಿನ ಜನರು ಮಾಸ್ಕ್​ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರ ಕಾಪಾಡಿಲ್ಲ ಎಂದು ಹೇಳಿದ್ದಾರೆ.

ಐಪಿಸಿ ಸೆಕ್ಷನ್​​​ ಹಾಗೂ ಸಾಂಕ್ರಾಮಿಕ ಕಾಯ್ದೆ ಸೆಕ್ಷನ್​ 269 ಅಡಿಯಲ್ಲಿ ಕಿರಣ್​ ವಿರುದ್ಧ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...