ಕೊರೊನಾ ವೈರಸ್ ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಹೋರಿಯ ಜನ್ಮದಿನವನ್ನ ಸ್ನೇಹಿತರ ಜೊತೆ ಸೇರಿ ಆಚರಿಸಿದ ಥಾಣೆಯ ದೊಂಬಿವಿಲಿಯ 30 ವರ್ಷದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಾಸ್ಕ್ ಧರಿಸದೇ ಹಾಗೂ ಸಾಮಾಜಿಕ ಅಂತರವನ್ನ ಕಾಪಾಡದೇ ಸ್ನೇಹಿತರೊಂದಿಗೆ ಹೋರಿಯ ಜನ್ಮದಿನವನ್ನ ಆಚರಿಸುತ್ತಿದ್ದ ಆರೋಪಿ ಕಿರಣ್ ಮಾತ್ರೆ ವಿರುದ್ಧ ಎಫ್ಐಆರ್ ದಾಖಲಾಗಿದೆ.
ದೊಂಬಿವಿಲಿ ಜಿಲ್ಲೆಯ ರೆಟಿ ಬಂಡರ್ನಲ್ಲಿದ್ದ ಕಿರಣ್ ಎಂಬವರ ನಿವಾಸದ ಬಳಿ ಈ ಪಾರ್ಟಿಯನ್ನ ಆಯೋಜಿಸಲಾಗಿತ್ತು. ಇನ್ನು ಈ ವಿಚಾರವಾಗಿ ಮಾಹಿತಿ ನೀಡಿದ ವಿಷ್ಣು ನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, ಕಾರ್ಯಕ್ರಮಕ್ಕೆ ಹಾಜರಾದ ಹೆಚ್ಚಿನ ಜನರು ಮಾಸ್ಕ್ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರ ಕಾಪಾಡಿಲ್ಲ ಎಂದು ಹೇಳಿದ್ದಾರೆ.
ಐಪಿಸಿ ಸೆಕ್ಷನ್ ಹಾಗೂ ಸಾಂಕ್ರಾಮಿಕ ಕಾಯ್ದೆ ಸೆಕ್ಷನ್ 269 ಅಡಿಯಲ್ಲಿ ಕಿರಣ್ ವಿರುದ್ಧ ಪ್ರಕರಣ ದಾಖಲಾಗಿದೆ.