alex Certify ನಿರಂತರ ಕಾರ್ಯಾಚರಣೆ ಬಳಿಕ ಬಾವಿಗೆ ಬಿದ್ದಿದ್ದ ಆನೆಯ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರಂತರ ಕಾರ್ಯಾಚರಣೆ ಬಳಿಕ ಬಾವಿಗೆ ಬಿದ್ದಿದ್ದ ಆನೆಯ ರಕ್ಷಣೆ

ಸುಮಾರು 14 ಗಂಟೆಗಳ ಕಾರ್ಯಾಚರಣೆ ಬಳಿಕ ತಮಿಳುನಾಡಿನ ಗ್ರಾಮವೊಂದರ ಜಮೀನಿನ ಬಾವಿಗೆ ಬಿದ್ದಿದ್ದ ಮಧ್ಯಮ ವಯಸ್ಕ ಆನೆಯನ್ನ ರಕ್ಷಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಪಂಪಪಳ್ಳಿ ಬಳಿಯ ಯೆಲಗುಂದೂರ್​ ಗ್ರಾಮದಲ್ಲಿರುವ ಬಾವಿಗೆ ಸುಮಾರು 8 ವರ್ಷದ ಹೆಣ್ಣು ಆನೆ ಬಿದ್ದಿತ್ತು. ಸ್ಥಳೀಯರು ಈ ವಿಚಾರವನ್ನ ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಕ್ರೇನ್​, ಹಗ್ಗದ ಸಹಾಯದಿಂದ ಬರೊಬ್ಬರಿ 14 ಗಂಟೆಗಳ ಬಳಿಕ ಆನೆಯನ್ನ ಬಾವಿಯಿಂದ ಮೇಲಕ್ಕೆತ್ತಿದೆ. ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...