alex Certify ಹೈದರಾಬಾದ್​​ನಲ್ಲಿ ಮಳೆ ಅಬ್ಬರಕ್ಕೆ ಕೊಚ್ಚಿ ಹೋದ ಕಾರುಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈದರಾಬಾದ್​​ನಲ್ಲಿ ಮಳೆ ಅಬ್ಬರಕ್ಕೆ ಕೊಚ್ಚಿ ಹೋದ ಕಾರುಗಳು

ಹೈದರಾಬಾದ್​ನಲ್ಲಿ ವರುಣನ ಆರ್ಭಟ ಮಿತಿ ಮೀರಿದೆ. ಸಿಕಂದರಾ​ಬಾದ್​ ಬಳಿ ರಸ್ತೆಗಳು ನದಿಗಳಂತಾಗಿದ್ದು ಭಾರೀ ಮಳೆಗೆ ಕೊಚ್ಚಿ ಹೋದ ಕಾರೊಂದು ಇನ್ನೊಂದು ಕಾರಿನ ಮೇಲೆ ಹೋಗಿ ನಿಂತಿದೆ.

ತೆಲಂಗಾಣ ರಾಜ್ಯದ ಬಹುತೇಕ ಜಿಲ್ಲೆಗಳು ಮಳೆಯ ಹೊಡೆತಕ್ಕೆ ನಲುಗಿ ಹೋಗಿವೆ, ಈಗಾಗಲೇ ಸೋಶಿಯಲ್​ ಮೀಡಿಯಾಗಳಲ್ಲಿ ಹೈದರಾಬಾದ್​ ಮಳೆಯ ರುದ್ರ ನರ್ತನದ ಸಾಕಷ್ಟು ವಿಡಿಯೋಗಳು ಹರಿದಾಡ್ತಾ ಇವೆ. ಅದರಲ್ಲೂ ಈ ವಿಡಿಯೋವಂತು ಹೈದರಾಬಾದ್​ನ ಸದ್ಯದ ಪರಿಸ್ಥಿತಿಗೆ ಹಿಡಿದ ಕೈ ಗನ್ನಡಿಯಾಗಿದೆ.

ಸರೂರ್ ​ನಗರದ ಗ್ರೀನ್​ ಪಾರ್ಕ್​ ಸಮೀಪದ ಕಾಲೋನಿಯೊಂದರಲ್ಲಿ ಸೆರೆಯಾದ ವಿಡಿಯೋದಲ್ಲಿ ನೋಡ ನೋಡ್ತಿದ್ದಂತೆ ಒಂದು ಕಾರು ಹಾಗೂ ವ್ಯಾನ್​ ಕೊಚ್ಚಿಕೊಂಡು ಹೋಗಿದೆ. ತೆಲಂಗಾಣದಲ್ಲಿ 14 ಜಿಲ್ಲೆಗಳಲ್ಲಿ ಈ ತರಹದ ಸಾಕಷ್ಟು ಘಟನೆಗಳು ವರದಿಯಾಗಿವೆ. ಹೈದರಾಬಾದ್​ನಲ್ಲಿ ಕಳೆದ 24 ಗಂಟೆಗಳಲ್ಲಿ 20 ಸೆಂ.ಮೀ. ಮಳೆಯಾಗಿದೆ. ತೆಲಂಗಾಣದಲ್ಲಿ ಕಳೆದ 48 ಗಂಟೆಗಳಲ್ಲಿ 12 ಮಂದಿ ಮಳೆಯಿಂದ ಪ್ರಾಣತೆತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...