ಬಾಲ್ಯದ ದಿನಗಳ ಸವಿನೆನಪುಗಳು ಎಂದರೆ ಎಂಥವರಿಗೂ ಭಾರೀ ರೋಮಾಂಚನ ಸೃಷ್ಟಿಸುವಂಥ ಘಳಿಗೆಗಳು.
1990ರ ದಶಕದಲ್ಲಿ ಬಾಲ್ಯ ಕಳೆದವರಿಗೆಂದು ತರುಣ್ ಲಾಕ್ ಅವರು ಪುಟ್ಟದೊಂದು ಅನಿಮೇಟೆಡ್ ಕ್ಲಿಪ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಈ ಕ್ಲಿಪ್‌ನಲ್ಲಿ ಯಾವುದೇ ಪದಗಳು ಇಲ್ಲದೇ ಇದ್ದರೂ ಸಹ ಆ ಚಿತ್ರಗಳೇ ಸಾವಿರಾರು ಮಧುರ ಭಾವಗಳನ್ನು ಉಕ್ಕಿಸುವಂತೆ ಮಾಡುತ್ತಿವೆ.
ಶಾಲೆಗೆ ಹೋಗುವಾಗ ರಸ್ತೆ ಬದಿಯ ತಿಂಡಿ ಖರೀದಿ ಮಾಡುತ್ತಿದ್ದ ಕ್ಷಣಗಳ, ಕ್ರಿಕೆಟ್ ಆಟದ ಮೇಲಿನ ಪ್ರೀತಿ, ಓದುವಾಗ ತೂಕಡಿಸುವುದು ಸೇರಿದಂತೆ ನಮ್ಮದೇ ಬಾಲ್ಯದ ದಿನಗಳ ಅನೇಕ ಮಧುರ ಕ್ಷಣಗಳನ್ನು ಮೆಲುಕು ಹಾಕಿಸುತ್ತಿದೆ ಈ ಕ್ಲಿಪ್.
“India Vignettes, a compilation!” ಹೆಸರಿನ ಈ ಕ್ಲಿಪ್‌ಗೆ ಅದಾಗಲೇ 70 ಲಕ್ಷಕ್ಕೂ ಅಧಿಕ ವೀವ್ಸ್ ಸಿಕ್ಕಿವೆ.
https://twitter.com/Tarun_Lak/status/1330753572137443328?ref_src=twsrc%5Etfw%7Ctwcamp%5Etweetembed%7Ctwterm%5E1330753572137443328%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwarm-and-nostalgic-this-viral-animated-video-is-making-90s-kids-miss-their-childhood-3112007.html