ಮಹಾರಾಷ್ಟ್ರದ ಶಿರಡಿಯಲ್ಲಿರುವ ಪ್ರಸಿದ್ಧ ಸಾಯಿಬಾಬಾ ಮಂದಿರಕ್ಕೆ ತೆರಳುವ ಭಕ್ತರಿಗೆ ಶ್ರೀ ಸಾಯಿಬಾಬಾ ಟ್ರಸ್ಟ್ ಡ್ರೆಸ್ಕೋಡ್ ಬಗ್ಗೆ ಮಾಹಿತಿ ನೀಡಿದೆ. ಭಾರತೀಯ ಸಂಸ್ಕೃತಿಯನ್ನ ಪ್ರತಿನಿಧಿಸುವ ಧಿರಿಸುಗಳನ್ನ ಹಾಕಿಕೊಂಡು ದೇಗುಲಕ್ಕೆ ಬರುವಂತೆ ಭಕ್ತರಿಗೆ ಹೇಳಿದೆ.
ದೇಶದ ಅನೇಕ ಪ್ರಸಿದ್ಧ ದೇಗುಲಗಳಿಗೆ ತೆರಳುವ ಭಕ್ತರಿಗೆ ಡ್ರೆಸ್ ಕೋಡ್ ನಿಗದಿ ಮಾಡಲಾಗಿದೆ. ಆದರೆ ಶಿರಡಿಗೆ ಆಗಮಿಸುವ ಭಕ್ತರಿಗೆ ಡ್ರೆಸ್ಕೋಡ್ ಮನವಿಯೇ ಹೊರತು ಆದೇಶವಲ್ಲ ಅಂತಾ ಶ್ರೀ ಸಾಯಿಬಾಬಾ ಟ್ರಸ್ಟ್ನ ಕಾರ್ಯನಿರ್ವಾಹಕ ಅಧಿಕಾರಿ ಕನ್ಹುರಾಜ್ ಬಾಗಟೆ ಸ್ಪಷ್ಟನೆ ನೀಡಿದ್ದಾರೆ.
ಅಹ್ಮದನಗರ ಜಿಲ್ಲೆಯ ಶಿರಡಿಯಲ್ಲಿರುವ ಪ್ರಸಿದ್ಧ ದೇಗುಲಕ್ಕೆ ಅನೇಕರು ಆಕ್ಷೇಪಾರ್ಹ ಡ್ರೆಸ್ಗಳನ್ನ ಹಾಕಿ ಬರುತ್ತಾರೆ ಎಂಬ ದೂರು ಕೇಳಿಬಂದ ಹಿನ್ನೆಲೆ ಈ ಮನವಿ ಮಾಡಿದ್ದೇವೆ ಅಂತಾ ಅವರು ಹೇಳಿದ್ರು.
ನೀವು ಧಾರ್ಮಿಕ ಸ್ಥಳಕ್ಕೆ ಪ್ರವೇಶಿಸುತ್ತಿರುವುದರಿಂದ ಸಾಯಿ ಬಾಬಾ ಭಕ್ತರಾದ ನೀವು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಉಡುಗೆಗಳನ್ನ ತೊಡಬೇಕೆಂದು ಕೋರಲಾಗಿದೆ ಎಂಬ ಪೋಸ್ಟರ್ಗಳನ್ನ ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಬರೆದು ಅಳವಡಿಸಲಾಗಿದೆ.