
ಗೋಯಲ್ ಈ ಪೋಸ್ಟ್ನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಉತ್ತರ ಪ್ರದೇಶ ಪೊಲೀಸ್ ಇಲಾಖೆಯನ್ನ ಟ್ಯಾಗ್ ಮಾಡಿದ್ದಾರೆ. ಭಾರತದ ಭವಿಷ್ಯ ಏನಾಗಲಿದೆ ಅನ್ನೋದು ಈ ವಿಡಿಯೋದಲ್ಲಿ ಕಾಣುತ್ತಿದೆ ಎಂದು ಶೀರ್ಷಿಕೆ ನೀಡಿದ್ದರು. ಇದಾದ ಬಳಿಕ ಸಾಮಾಜಿಕ ಕಾರ್ಯಕರ್ತೆ ಮಧು ಕಿಶ್ವಾರ್ ಸೇರಿದಂತೆ ಅನೇಕರು ಈ ವಿಡಿಯೋ ಶೇರ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಮಧು ಕಿಶ್ವಾರ್ ಸೇರಿದಂತೆ ಅನೇಕರು ಹಂಚಿಕೊಂಡಿರುವ ಈ ವಿಡಿಯೋ ಈಗಿನದ್ದಲ್ಲ. ಬದಲಾಗಿ ಇದು ಆಗಸ್ಟ್ 2018ರಲ್ಲಿ ನಡೆದ ಘಟನೆ ಅನ್ನೋದು ಫ್ಯಾಕ್ಟ್ ಚೆಕ್ನಲ್ಲಿ ಬಯಲಾಗಿದೆ. ಎಸ್ಬಿಐ ಬ್ಯಾಂಕ್ಗೆ ಆಧಾರ್ ಕಾರ್ಡ್ ಸರಿ ಮಾಡಿಸಲು ಬಂದಿದ್ದ ಮಹಿಳೆ ಈ ಕೃತ್ಯ ಎಸಗಿದ್ದು 2018ರಲ್ಲೇ ಆಕೆಯ ವಿರುದ್ಧ ದೂರು ದಾಖಲಾಗಿದೆ.
ಕಿಶ್ವರ್ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ತಪ್ಪು ಮಾಹಿತಿ ನೀಡ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೊಲ್ಕತ್ತಾದಲ್ಲಿ ಇಸ್ಲಾಮಿಕ್ ಱಲಿ ಸಂಬಂಧ ವಿಡಿಯೋವೊಂದನ್ನ ಕಿಶ್ವಾರ್ ಹಂಚಿಕೊಂಡಿದ್ದರು. ಬಳಿಕ ಅವರು ಕೊಲ್ಕತ್ತಾ ಪೊಲೀಸರ ಬಳಿ ಕ್ಷಮೆಯನ್ನೂಯಾಚಿಸಿದ್ದಾರೆ.
https://twitter.com/i/status/1352126333854224384