alex Certify ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ ಈ ಬೈಕ್‌ ಸವಾರಿ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ ಈ ಬೈಕ್‌ ಸವಾರಿ ವಿಡಿಯೋ

ಸೋಶಿಯಲ್ ಮೀಡಿಯಾದಲ್ಲಿ ಮನರಂಜನೆಗೆ ಬರವೇ ಇಲ್ಲ. ಒಂದು ವೇಳೆ ನಿಮಗೆ ಬೋರು ಎನಿಸಿತು ಅಂದರೆ ನೀವು ಒಂದು ಬಾರಿ ಸೋಶಿಯಲ್ ಮೀಡಿಯಾ ರೌಂಡ್ಸ್ ಹಾಕಿದ್ರೆ ಸಾಕು. ದುನಿಯಾದ ಮೂಲೆ ಮೂಲೆಯಿಂದ ಮನರಂಜನೆಯನ್ನ ನೀಡುವಂತಹ ವೀಡಿಯೋಗಳು ನಿಮ್ಮ ಮೊಬೈಲ್​ ಸ್ಕ್ರೀನ್​ ಮೇಲೆ ಕಾಣ ಸಿಗುತ್ತವೆ.

ಇದೇ ರೀತಿಯ ಇನ್ನೊಂದು ವಿಡಿಯೋ ಕೆಲ ದಿನಗಳಿಂದ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗೋದಾ ಇಲ್ಲ ಈ ಭಯಾನಕ ಸಾಹಸವನ್ನ ಕಂಡು ಆಶ್ಚರ್ಯ ಪಡೋದಾ ಎಂದು ಗೊಂದಲದಲ್ಲಿದ್ದಾರೆ.

ವೈರಲ್​ ಆಗುತ್ತಿರುವ ಈ ವಿಡಿಯೋವನ್ನ ಫೇಸ್​​ಬುಕ್​​ನಲ್ಲಿ ವೂಡ್​ ವರ್ಕಿಂಗ್​ ಕೆ ಹೆಚ್​ ಎಂಬ ಹೆಸರಿನ ಖಾತೆಯಲ್ಲಿ ಶೇರ್​ ಮಾಡಲಾಗಿದೆ. ವಿಡಿಯೋದಲ್ಲಿ ಓರ್ವ ವ್ಯಕ್ತಿ ಗುಜರಿ ಬೈಕ್​ನ್ನ ಹಿಡಿದು ಭಯಾನಕ ಸ್ಟಂಟ್​ನ್ನು ಮಾಡಿದ್ದಾನೆ. ಕೇವಲ ಒಂದು ಚಕ್ರವನ್ನ ಹೊಂದಿರುವ ಬೈಕ್​ ಮೇಲೆ ನಿಂತು ಕೊಂಡು ಈತ ಬೈಕ್​ ಸವಾರಿ ಮಾಡ್ತಿದ್ದಾನೆ.

ಈ ವಿಡಿಯೋವನ್ನ ಯಾರ್ಯಾರು ನೋಡಿದ್ದಾರೋ ಅವರೆಲ್ಲ ಶಾಕ್​ ಆಗಿದ್ದಾರೆ. ಈ ಗುಜರಿ ಬೈಕ್​ ಅದೆಂಗೆ ಇಷ್ಟು ನಿರಾಯಸವಾಗಿ ಚಲಿಸುತ್ತಿದೆ ಅನ್ನೋದೇ ಎಲ್ಲರ ಪ್ರಶ್ನೆಯಾಗಿದೆ.

This is so much Amazing ???

This is so much Amazing?????https://bit.ly/39AWTtB

Posted by Woodworking KH on Wednesday, February 3, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...