alex Certify ಅಡಗಲು‌ ಮೋಟು ಮರ ಆಶ್ರಯಿಸಿದ ಆನೆ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡಗಲು‌ ಮೋಟು ಮರ ಆಶ್ರಯಿಸಿದ ಆನೆ ಫೋಟೋ ವೈರಲ್

ಇಂಟರ್ನೆಟ್ ನಲ್ಲಿ ಎಂತೆಂತಹ ಫನ್ನಿ ಫೋಟೋ, ವಿಡಿಯೋಗಳು ವೈರಲ್ ಆಗುತ್ತವೆಂದರೆ, ಅವುಗಳನ್ನು ಕಣ್ತುಂಬಿಕೊಂಡು ಪ್ರೀತಿಸದೆ ಇರಲಾರೆವು.

ಇದು ಅಂತಹುದೇ ಬತ್ತಳಿಕೆಯಿಂದ ಬಿಟ್ಟ ಫೋಟೋ ಆಗಿದೆ. ಆನೆಯೊಂದು ಸಣ್ಣ ಮರದ ಹಿಂದೆ ಹೋಗಿ ಅಡಗಿಕೊಳ್ಳಲು ಪ್ರಯತ್ನಿಸುವ ಈ ಫೋಟೋ ಅದೆಷ್ಟು ನಗೆ ತರಿಸುತ್ತದೆ ಎಂದರೆ, ಅದನ್ನು ನೋಡಿಯೇ ನಗಬೇಕು.

ಐಎಫ್ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್ ಅವರು ಮಾಡಿರುವ ಟ್ವೀಟ್ ನಲ್ಲಿ ಖುಷಿ ಕೊಡುವ ಈ ಫೋಟೋ, ನೋಡಿದವರೆಲ್ಲ ಮುಗುಳ್ನಕ್ಕು ಸಂತೋಷ ವ್ಯಕ್ತಪಡಿಸಿದ್ದಾರೆ. ತಾನು ಮಾತ್ರ ಮರದ ಮರೆಗೆ ಹೋಗಿ, ತನ್ನಿಡೀ ಶರೀರವೇ ಮರೆಯಾಗಿ ಎಂದುಕೊಳ್ಳುವ ಆನೆಯ ತುಂಟಾಟ, ಮುಗ್ಧತೆ ನೋಡುಗರನ್ನು ಖಂಡಿತ ಹಿಡಿದಿಡುತ್ತದೆ. ಅಷ್ಟಗಲದ ಆನೆ, ಇಷ್ಟೇ ಇಷ್ಟಿರುವ ಮರದ ಹಿಂದೆ ಅವಿತು ಕೂರಲು ಹೋದರೂ ಅದರ ದೇಹ ಕಂಡೇ ಕಾಣುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...