alex Certify OMG..! ನಿವೃತ್ತ ಪೊಲೀಸ್​ ಅಧಿಕಾರಿಗೆ ಇದೆಂತಾ ವಿದಾಯ ಕಾರ್ಯಕ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG..! ನಿವೃತ್ತ ಪೊಲೀಸ್​ ಅಧಿಕಾರಿಗೆ ಇದೆಂತಾ ವಿದಾಯ ಕಾರ್ಯಕ್ರಮ

ನಿವೃತ್ತ ಸಬ್​ ಇನ್ಸ್​ಪೆಕ್ಟರ್​ರೊಬ್ಬರ ವಿದಾಯ ಕಾರ್ಯಕ್ರಮದಲ್ಲಿ ಯುವಕರು ಮದ್ಯದ ಬಾಟಲಿಗಳನ್ನ ಉಡುಗೊರೆಯಾಗಿ ನೀಡಿದ ವಿಲಕ್ಷಣ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗ್ತಿದೆ.

ಕಾನ್ಪುರ್​​ದ ದೇಹತ್​ ಜಿಲ್ಲೆಯ ರುರಾ ಪಟ್ಟಣದಲ್ಲಿ ನಿವೃತ್ತಿ ಪಡೆದಿದ್ದ ಪೊಲೀಸ್​​ ಸಬ್​ ಇನ್ಸ್​​ಪೆಕ್ಟರ್​ರನ್ನ ಪೊಲೀಸರು ಖುರ್ಚಿಯ ಮೇಲೆ ಕೂರಿಸಿ ಮೆರವಣಿಗೆ ಮಾಡಿದ್ದಾರೆ. ಮೆರವಣಿಗೆ ವೇಳೆ ಸ್ಥಳೀಯರು ನೃತ್ಯ ಮಾಡಿದ್ದಾರೆ. ಕೆಲ ಯುವಕರಂತೂ ಎಸ್​ಐಗೆ ವೈನ್​ ಬಾಟಲಿಯನ್ನ ಉಡುಗೊರೆಯಾಗಿ ನೀಡಿ ಆರ್ಶೀವಾದ ಪಡೆದಿದ್ದಾರೆ.

ಇಷ್ಟು ಸಾಲದು ಎಂಬಂತೆ ಕರೊನಾ ನಿಯಮಾವಳಿಗಳಾದ ಮಾಸ್ಕ್​​ ಧರಿಸೋದು ಹಾಗೂ ಸಾಮಾಜಿಕ ಅಂತರ ಕಾಪಾಡೋದನ್ನೂ ಮರೆತಿದ್ದಾರೆ. ಅಂದಹಾಗೆ ಈ ವಿಡಿಯೋದಲ್ಲಿರುವ ಪೊಲೀಸ್​ ಅಧಿಕಾರಿಯ ಹೆಸರು ರಾಮ್​ಕಿಶೋರ್​​ ಎಂದು ಹಾಗೂ ಇವರು ವಿರಾ ಠಾಣೆಯ ಸಬ್​ಇನ್ಸ್​ಪೆಕ್ಟರ್​ ಆಗಿದ್ದರು ಎಂಬ ವಿಚಾರ ವಿಡಿಯೋ ವೈರಲ್​ ಆದ ಬಳಿಕ ಬೆಳಕಿಗೆ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...