ಅವರೆಲ್ಲಾ ಇಂಟೀರಿಯರ್ ಡಿಸೈನಿಂಗ್ ಅಂಡ್ ಆರ್ಕಿಟೆಕ್ಟ್ ತರಬೇತಿ ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ ಅಂದುಕೊಂಡ ಸ್ಥಳೀಯರಿಗೆ ಶಾಕ್ ಆಗಿದೆ. ಯಾಕಂದ್ರೆ ಅಲ್ಲಿ ನಡೆಯುತ್ತಿದ್ದದ್ದು ಆನ್ಲೈನ್ನಲ್ಲಿ ಅಂಗಾಂಗ ಪ್ರದರ್ಶನದ ತರಬೇತಿ.
ಹೌದು, ಈ ಘಟನೆ ನಡೆದಿರೋದು ಗುಜರಾತ್ನ ವಡೋದರ ನಗರದಲ್ಲಿ. ಈ ಕಟ್ಟಡದ ಹೊರಗೆ ಡಿಸೈನಿಂಗ್ ಅಂಡ್ ಆರ್ಕಿಟೆಕ್ಟ್ ತರಬೇತಿ ಅಂತಾ ಬೋರ್ಡ್ ಹಾಕಲಾಗಿತ್ತು. ಆದರೆ ಈ ಕಟ್ಟಡದ ಒಳಗೆ ವರ್ಚುವಲ್ ಸೆಕ್ಸ್ ದಂಧೆ ನಡೆಯುತ್ತಿತ್ತಂತೆ. ಈ ಖಚಿತ ಮಾಹಿತಿ ಪಡೆದ ಪೊಲೀಸರು ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ. ಈ ದಂಧೆಯ ರೂವಾರಿ ನೀಲೇಶ್ ಗುಪ್ತ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ.
ಇನ್ನು ಈ ಜಾಲ ಪತ್ತೆಯಾಗಿದ್ದೆ ಒಂದು ರೋಚಕ. ಸದ್ಯ ಕೊರೊನಾದಿಂದಾಗಿ ಆನ್ಲೈನ್ ಕ್ಲಾಸ್ಗಳು ನಡೆಯುತ್ತಿವೆ. ಆದರೆ ಬೇರೆ ಬೇರೆ ರಾಜ್ಯಗಳಿಂದ ತರಗತಿಗಳಿಗೆ ಅಂತ ಯುವತಿಯರು ಇಲ್ಲಿಗೆ ಬರುತ್ತಿದ್ದರಂತೆ. ಎಲ್ಲಾ ಕಡೆ ಆನ್ಲೈನ್ ಕ್ಲಾಸ್ ನಡೆಯುತ್ತಿರುವಾಗ ಈ ಯುವತಿಯರು ಹೀಗೆ ಯಾಕೆ ತರಗತಿಗಳಿಗೆ ಬರುತ್ತಾರೆಂಬ ಅನುಮಾನ ಹಲವರಲ್ಲಿ ಮೂಡಿದೆ.
ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಅಲ್ಲಿನ ಸ್ಥಳೀಯರು. ಕಾರ್ಯಪ್ರವೃತ್ತರಾದ ಪೊಲೀಸರು ಸಮಯ ನೋಡಿಕೊಂಡು ದಾಳಿ ನಡೆಸಿದಾಗ ಸತ್ಯಾಂಶ ತಿಳಿದಿದೆ. ಈ ಪ್ರಕರಣ ಕುರಿತು ತನಿಖೆ ಆರಂಭವಾಗಿದ್ದು, ಇದರ ಹಿಂದೆ ದೊಡ್ಡ ಜಾಲವೇ ಇದೆ ಎಂಬ ಅನುಮಾನ ಪೊಲೀಸರಲ್ಲಿದೆ.